ಹೊನ್ನಾವರ : ಕೊರೊನಾ ಎರಡನೇ ಅಲೆಯ ಕಾರಣಕ್ಕೆ ಬಾಗಿಲು ಮುಚ್ಚಿದ್ದ ದೇವಾಲಯಗಳನ್ನು ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ಜುಲೈ ಮೂರರಂದು ಬಾಗಿಲು ತೆರೆದು ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದ್ದ ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ ಇಂದಿನಿಂದ ಸರ್ವವಿಧ ಸೇವೆಗಳು ಪ್ರಾರಂಭವಾಗಲಿದೆ ಎಂದು ದೇವಾಲಯದ ಪಾರಂಪರಿಕ ಅರ್ಚಕರಾದ ವೇ.ಮೂ. ಮಂಜುನಾಥ ಶಿವರಾಮ್ ಭಟ್ಟ ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆಯ ಕಾರಣಕ್ಕೆ ಬಾಗಿಲು ಮುಚ್ಚಿದ್ದ ದೇವಾಲಯಗಳನ್ನು ಲಾಕ್ ಡೌನ್ ಸಡಿಲಿಕೆ ಮಾಡಿದ ನಂತರ ಜುಲೈ ಮೂರರಂದು ಬಾಗಿಲು ತೆರೆದು ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತಾದರೂ ದೇವಾಲಯಗಳಲ್ಲಿ ಭಕ್ತರಿಗೆ ಯಾವುದೇ ರೀತಿಯ ಸೇವೆಗಳಿಗೆ ಅವಕಾಶವಿರಲಿಲ್ಲ.

RELATED ARTICLES  ಗಾಂಜಾ ಮಾರಾಟ : ಓರ್ವನ ಬಂಧನ

ಜುಲೈ 25 ರಂದು ಸರ್ಕಾರ ಕೋವಿಡ್ ನಿಯಮಾವಳಿಗಳ ಪರಿಷ್ಕೃತ ಆದೇಶ ಹೊರಡಿಸಿದ್ದು ದೇವಾಲಯ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿ ಪೂಜೆ, ಪುನಸ್ಕಾರ ಸೇರಿದಂತೆ ವಿವಿಧ ರೀತಿಯ ಸೇವೆಗಳನ್ನು ಮಾಡಿಸಲು ಭಕ್ತರಿಗೆ ಅವಕಾಶ ನೀಡಲಾಗಿದೆ. ಕೋವಿಡ್ 19 ಸುರಕ್ತಾ ನಿಯಮಗಳನ್ನು ಪಾಲಿಸಿ ದೇವಾಲಯಗಳಲ್ಲಿ ದರ್ಶನ ಹಾಗೂ ಪೂಜೆ ಇನ್ನಿತರ ಸೇವೆಗಳನ್ನು ಸಲ್ಲಿಸಬಹುದಾಗಿದೆ.

RELATED ARTICLES  ಚಳಿಯ ಕಾರಣ ಒಲೆಯಲ್ಲಿ ಬೆಂಕಿ ಕಾವು ಪಡೆಯುವಾಗ ಅವಘಡ

ಜುಲೈ.27 ಅಂಗಾರಕ ಸಂಕಷ್ಠಿ

ಜುಲೈ 27 ರಂದು ಅಪರೂಪವೂ ಹಲವಾರು ವಿಶೇಷತೆಯುಳ್ಳದ್ದೂ ಆಗಿರುವ ಅಂಗಾರಕ ಸಂಕಷ್ಠಿ ಇರುವ ಹಿನ್ನಲೆಯಲ್ಲಿ ಧಾರ್ಮಿಕ ಕೇಂದ್ರಗಳಲ್ಲಿ ಸೇವೆಗೆ ಅವಕಾಶ ಕಲ್ಪಿಸಿರುವುದು ಭಕ್ತರ ಖುಷಿಗೆ ಕಾರಣವಾಗಿದೆ. ಅಂಗಾರಕ ಸಂಕಷ್ಠಿಯಂದು ಇಡಗುಂಜಿಗೆ ನಾಡಿನ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆಯಲು ಆಗಮಿಸುವ ಸಾಧ್ಯತೆ ಇದೆ.

ಕೊರೋನಾ ನಿಯಮಾವಳಿ ಕಡ್ಡಾಯ
ದೇವಾಲಯಕ್ಕೆ ಬರುವ ಭಕ್ತರಿಗೆ ಕೊರೋನಾ ನಿಯಮವಾದ ಮಾಸ್ಕ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದೆ ಎಂದು ದೇವಾಲಯದ ಆಡಳಿತಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.