ಕುಮಟಾ: ವಿಪರೀತ ಮಳೆಯಿಂದಾಗಿ ಸಂಚಾರಕ್ಕೆ ಅಡಚಣೆಯುಂಟಾಗಿ ತಾಲೂಕಿನ ಹೊಳೆಗದ್ದೆ ಟೋಲ್ ಗೇಟ್ ಬಳಿ ನಿಂತಿದ್ದ 300 ಕ್ಕೂ ಅಧಿಕ ಬೃಹತ್ ವಾಹನಗಳ ಚಾಲಕ, ನಿರ್ವಾಹಕರಿಗೆ ದೇವಗಿರಿ ಪಂಚಾಯತ ಉಪಾಧ್ಯಕ್ಷ ಎಸ್.ಟಿ.ನಾಯ್ಕ ಹಾಗೂ ಬಾಲಕೃಷ್ಣ ಬಾಳೇರಿ ನೇತೃತ್ವದಲ್ಲಿ ಉಚಿತ ಊಟ ಹಾಗೂ ಉಪಹಾರ ವ್ಯವಸ್ಥೆ ಕಲ್ಪಿಸಲಾಯಿತು.

ಮಳೆ ಆರ್ಭಟದಿಂದ ಘಟ್ಟದ ಪ್ರದೇಶದ ಹೆದ್ದಾರಿಗಳಲ್ಲಿ ಹಲವೆಡೆ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪರಿಣಾಮ ಕಳೆದೆರಡು ದಿನಗಳಿಂದ ಹೊಳೆಗದ್ದೆ ಟೋಲ್ ಗೇಟ್ ಸುತ್ತಮುತ್ತಲು ಹಲವಾರು ಲಾರಿಗಳು ನಿಂತುಕೊಂಡಿವೆ. ಟೋಲ್‍ಗೇಟ್ ಬಳಿ ಹೋಟೆಲ್‍ಗಳಿರದ ಕಾರಣ, ಕುಡಿಯುವ ನೀರಿಗೂ ಚಾಲಕ, ನಿರ್ವಾಹಕರು ಸಮಸ್ಯೆ ಎದುರಿಸುತ್ತಿರುವುದನ್ನು ಗಮನಿಸಿ, ನೆರವಿಗೆ ಮುಂದಾದ ಎಸ್.ಟಿ.ನಾಯ್ಕ ಅವರು ಬಾಳೇರಿ ಅವರೊಂದಿಗೆ ಚರ್ಚಿಸಿ, ಬೆಳಿಗ್ಗೆಯ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ, ಮಾನವೀಯತೆ ಮೆರೆದಿದ್ದಾರೆ.

RELATED ARTICLES  ಸಿಡಿಲು ಬಡಿದು ಆಕಳು ಸಾವು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೇವಗಿರಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಟೋಲ್‍ಗೇಟ್ ಜನರಲ್ ಮ್ಯಾನೇಜರ್ ವಿವೇಕ ಗಡಿಕರ, ಪ್ರಾಜೆಕ್ಟ್ ಮ್ಯಾನೇಜರ್ ನಿಲೇಶ, ಗ್ರಾ.ಪಂ ಸದಸ್ಯರಾಸ ಪಾಂಡು ಪಟಗಾರ, ದೇವೆಂದ್ರ ಶೇರುಗಾರ, ಪಿಡಿಓ ವಿಜಯಕುಮಾರ, ಪ್ರಮುಖರಾದ ಸುರೇಶ ಹರಿಕಾಂತ, ಕೇಶವ ಮಡಿವಾಳ, ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಮಾದೇವ ಪಟಗಾರ, ಬಷೀರ, ಸುಬ್ರಾಯ ಪಟಗಾರ, ಮುರುಳಿ ಸೇರಿದಂತೆ ಇತರರು ಇದ್ದರು

RELATED ARTICLES  ಹಬ್ಬದ ಸಮಯದಲ್ಲಿ ಖಾಸಗಿ ಬಸ್ ದರ ಗಗನಕ್ಕೆ : ಗ್ರಾಹಕರ ಜೋಬಿಗೆ ಕತ್ತರಿ