ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ನಲ್ಲಿ ದಿನಾಂಕ 23/07/2021 ರಿಂದ ಇಂದಿನ ವರೆಗಿನ ವರದಿ ನೀಡಲಾಗಿದ್ದು ಕೇವಲ 132 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ.

ಇಂದಿನ ಹೆಲ್ತ ಬುಲೆಟಿನ್ ಒಟ್ಟೂ 4 ಸಾವು ಸಂಭವಿಸಿದ್ದು ಅಂಕೋಲಾ 1, ಹೊನ್ನಾವರ 2, ಭಟ್ಕಳ ಒಂದು ಸಾವು ಸಂಭವಿಸಿದೆ. ಉತ್ತರ ಕನ್ನಡದಲ್ಲಿ ಈ ಮೂಲಕ ಒಟ್ಟು ಸಾವಿಗೀಡಾದವರ ಸಂಖ್ಯೆ 723 ಕ್ಕೆ ಏರಿಕೆಯಾಗಿದೆ.

ಕಾರವಾರದಲ್ಲಿ 14, ಅಂಕೋಲಾದಲ್ಲಿ 27, ಕುಮಟಾದಲ್ಲಿ 30, ಹೊನ್ನಾವರ 24, ಭಟ್ಕಳದಲ್ಲಿ 16, ಶಿರಸಿಯಲ್ಲಿ 6, ಸಿದ್ದಾಪುರದಲ್ಲಿ 0, ಯಲ್ಲಾಪುರದಲ್ಲಿ 10, ಮುಂಡಗೋಡ 5, ಹಳಿಯಾಳದಲ್ಲಿ 0, ಮತ್ತು ಜೋಯಿಡಾದಲ್ಲಿ 0 ಒಟ್ಟೂ 132 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಜನವರಿ 1ರಿಂದಲೇ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪ್ರಾರಂಭ : ಸಿ.ಎಂ ಸ್ಪಷ್ಟನೆ

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 340 ಆಗಿದ್ದು, ಅವರಲ್ಲಿ 42 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 298 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 7, ಅಂಕೋಲಾ‌ 17, ಕುಮಟಾ 24, ಹೊನ್ನಾವರ 19, ಭಟ್ಕಳ 12, ಶಿರಸಿ 16, ಸಿದ್ದಾಪುರ 5, ಯಲ್ಲಾಪುರ 7, ಮುಂಡಗೋಡ 0, ಹಳಿಯಾಳ 4, ಜೋಯ್ಡಾ 0 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 111 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಅಮೃತಧಾರಾ ಗೋಶಾಲೆಗೆ ಮೇವು ಪೂರೈಸುವ ವಿಶಿಷ್ಟ ಕಾರ್ಯ " ಸೇವಾಅರ್ಘ್ಯ, ಗೋವಿಗಾಗಿ ಮೇವು " ಶ್ರಮದಾನ

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.