ಭಟ್ಕಳ : ಉತ್ತರಕನ್ನಡದಲ್ಲಿ ಮತ್ತೆ ಅಕ್ರಮ ಗೋಮಾಂಸ ಸಾಗಾಟ ಸದ್ದು ಮಾಡುತ್ತಿದೆ. ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಸಾರ್ವಜನಿಕರಿಗೆ ಅಷ್ಟೇ ಅಲ್ಲದೆ ಪೊಲೀಸ್ ಅಧಿಕಾರಿಗಳಿಗೂ ತಲೆನೋವಾಗಿ ಪರಿಣಮಿಸಿದೆ.

ಅಕ್ರಮವಾಗಿ ಕಾರೊಂದರಲ್ಲಿ 200 ಕೆಜಿ ದನದ ಮಾಂಸ ಸಾಗಾಟ ಮಾಡುತ್ತಿರುವ ವೇಳೆ ಶಿರಾಲಿ ಸರ್ಕಲ್ ಸಮೀಪ ಕಾರ ತಡೆದು ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ಸೋಮವಾರ ವರದಿಯಾಗಿದೆ.

RELATED ARTICLES  ‘ಸದೈವ ಅಟಲ್’ ಸ್ಮಾರಕ: ವಾಜಪೇಯಿ ಅವರ ಜನ್ಮದಿನದಂದೇ ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆ

ಟಾಟಾ ಇಂಡಿಕಾ ಕಾರಿನಲ್ಲಿ ದನದ ಮಾಂಸ ತುಂಬಿ ಸಾಗಾಟ ಮಾಡುವ ವೇಳೆ ಶಿರಾಲಿ ಸರ್ಕಲ್ ಸಮೀಪ ಕಾರಿನ ಸಮೇತ ಆರೋಪಿ ಸಿಕ್ಕಿಬಿದ್ದಿದ್ದಾನೆ ಎನ್ನಲಾಗಿದೆ.

ಯಾವುದೇ ಪರವಾನಗಿ ಇಲ್ಲದೆ, 40 ಸಾವಿರ ಮೌಲ್ಯದದ 200 ಕೆಜಿ ಆಗುವಷ್ಟು ದನದ ಮಾಂಸವನ್ನು ಯಾವುದೇ ಪಾಸ್ ಸಾಗಿಸುತ್ತಿದ್ದರು. ಆರೋಪಿಗಳು ಸಲಿಂ ಇಬ್ರಾಹಿಂ ಸಾಬ್ , ನಬಿ ಕಾಟನಳಿ ಹಾಗೂ ತಬ್ರೇಜ್ ಎಂದು ತಿಳಿದು ಬಂದಿದೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಕಾಯ್ದೆ ಬಗ್ಗೆ ವೈದ್ಯರಲ್ಲಿದ್ದ ಆತಂಕ, ಭಯ ನಿವಾರಿಸಲಾಗಿದೆ : ಸಿದ್ದರಾಮಯ್ಯ

ಇಂತಹ ಪ್ರಕರಣಗಳು ಪದೇ ಪದೇ ಬೆಳಕಿಗೆ ಬರುತ್ತಿದ್ದು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ ಎಂಬ ಅನಿಸಿಕೆ ಎಲ್ಲೆಡೆ ವ್ಯಕ್ತವಾಗಿದೆ.