ಕುಮಟಾ: ಎರಡು ಬೈಕ್‍ಗಳ ನಡುವೆ ಹಿರೇಗುತ್ತಿ ಬಳಿ ಅಪಘಾತ ಸಂಭವಿಸಿ, ಮೂವರಿಗೆ ಗಾಯವಾದ ಘಟನೆ ವರದಿಯಾಗಿದೆ.ಗಾಯಾಳುಗಳನ್ನು ರಾಜೇಶ್ ನಾಯ್ಕ, ಆತನ ಪತ್ನಿ ಮತ್ತು ರಾಮಾ ಹರಿಕಾಂತ ಎಂದು ಗುರುತಿಸಲಾಗಿದೆ.

RELATED ARTICLES  ಉತ್ತರಕನ್ನಡದಲ್ಲಿ ನಾಳೆ ಲಭ್ಯವಿರುವ ಕೊರೋನಾ ಲಸಿಕಾ ವಿವರ

ಸ್ಕೂಟಿ ಸವಾರ, ಯಾವುದೇ ಸಿಗ್ನಲ್ ನೀಡದೆ, ಸಡನ್ ಆಗಿ ತಿರುಗಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿಯ ರಭಸದಿಂದಾಗಿ ಮೂವರು ನಡುರಸ್ತೆಯಲ್ಲೇ ಕೆಳಕ್ಕೆ ಬಿದ್ದಿದ್ದರು. ಈ ವೇಳೆ ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು, ಗಾಯಾಗಳನ್ನು ಮೇಲೆತ್ತಿದ್ದಾರೆ.

RELATED ARTICLES  ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಕುಮಟಾದಲ್ಲಿ ಓರ್ವನ ಬಂಧನ

ಆಂಬುಲೆನ್ಸ್ ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಗೋಕರ್ಣ ಪೋಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.