ಜಿಲ್ಲೆಯಲ್ಲಿ ನಾಳೆ ಲಭ್ಯವಿರುವ ವ್ಯಾಕ್ಸೀನ್ ವಿವರ ಇಲ್ಲಿದೆ. ಶಿರಸಿ 1500, ಅಂಕೋಲಾದಲ್ಲಿ 800, ಭಟ್ಕಳ 1500, ಹಳಿಯಾಳ 500, ಹೊನ್ನಾವರ 1500, ಜೋಯ್ಡಾ 400, ಕಾರವಾರ 1500, ಮುಂಡಗೋಡ 800, ಕುಮಟಾ 1500, ಸಿದ್ದಾಪುರ 800, ಯಲ್ಲಾಪುರ 800, ದಾಂಡೇಲಿ 400, ಡಿವಿಎಸ್‍ನಲ್ಲಿ 1200 ಡೋಸ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಲು ವಿನಂತಿಸಿದೆ.

ಕುಮಟಾದಲ್ಲಿ ಎಲ್ಲೆಲ್ಲಿ?

ಕುಮಟಾದಲ್ಲಿ ನಾಳೆ ಒಟ್ಟೂ 1500 ಕೋವೀಶೀಲ್ಡ್ ವ್ಯಾಕ್ಸಿನ್ ಲಭ್ಯವಿದ್ದು, ಎರಡನೇ ಡೋಸ್ ಮಾತ್ರ ನಾಳೆ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ಕುಮಟಾ ತಾಲೂಕಾ ಆಸ್ಪತ್ರೆಯಲ್ಲಿ 150, ಬಂಕಿಕೊಡ್ಲ 150, ಹಿರೇಗುತ್ತಿ 75, ಕಾಗಲ್ 150, ಕತಗಾಲ 150, ಕೋಡ್ಕಣಿ 100, ಸಂತೇಗುಳಿ 100, ಮಿರ್ಜಾನ್ 75, ಅಘನಾಶಿನಿ 100, ಶಶಿಹಿತ್ತಲ 200, ಹೆಗಡೆ 100, ವಾಲಗಳ್ಳಿ 150 ವ್ಯಾಕ್ಸೀನ್ ಲಭ್ಯವಿದೆ. ಇದು ಎರಡನೇ ಡೋಸ್ ಮಾತ್ರವಾಗಿದೆ.

RELATED ARTICLES  ಭಾರತಕ್ಕೆ ಬಂತು ಆನೆ ಬಲ..!

ಅಂಕೋಲಾದಲ್ಲಿ ಎಷ್ಟು ಡೋಸ್..

ಜುಲೈ 27 ರ ಮಂಗಳವಾರ ಒಟ್ಟೂ 800 ಡೋಸ್ ಲಸಿಕೆ ವಿತರಣೆಗೆ ಆರೋಗ್ಯ ಇಲಾಖೆ ಕ್ರಮಕೈಗೊಂಡಿದೆ. ಕಣಗಿಲ(200), ಭಾವಿಕೇರಿ (60), ಗುಂಡಬಾಳ(40), ಹಾರವಾಡ (100),ಅಗಸೂರ (50), ಸುಂಕಸಾಳ (50), ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ(240), ಬಬ್ರುವಾಡಾ (60). ವಿಂಗಡಣೆ ಮಾಡಲಾಗಿದೆ ಎಂದು ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ

RELATED ARTICLES  ಅಯೋಧ್ಯೆ ಭೂ ವಿವಾದ ಇತ್ಯರ್ಥ:'ಸುಪ್ರೀಂಕೋರ್ಟ್'ನಿಂದ ಸಂಧಾನ ಸಮಿತಿ ನೇಮಕ.

ಶಿರಸಿಯಲ್ಲಿ ಕೋವಿಡ್ ವ್ಯಾಕ್ಸೀನ್

ಶಿರಸಿ ಜನತೆಗೆ ಕೊರೊನಾ ವ್ಯಾಕ್ಸಿನ್ ವಿತರಣೆ ಮಾಡಲು ಕ್ಯಾಂಪ್‍ಗಳನ್ನು ಆಯೋಜಿಸಿ ನೀಡಲಾಗುತ್ತಿದ್ದು, ಜುಲೈ.27 ಮಂಗಳವಾರ ಶಿರಸಿ ತಾಲೂಕಿನಲ್ಲಿ ಒಟ್ಟೂ 1500 ಡೋಸ್ ಕೋವಿಶೀಲ್ಡ್ ಲಸಿಕೆಯಿದ್ದು, ಅದನ್ನು 2 ನೇ ಡೋಸ್ ಬಾಕಿಯಿರುವವರಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

1500 ಡೋಸ್ ಲಸಿಕೆಯಲ್ಲಿ ತಾಲೂಕಿನ ಸಾಲ್ಕಣಿಯಲ್ಲಿ 200, ಕಕ್ಕಳ್ಳಿ 100, ಸುಗಾವಿ 100, ದಾಸನಕೊಪ್ಪ 100, ಹುಲೇಕಲ್ 100, ಹೆಗಡೆಕಟ್ಟಾ 100, ಬಿಸಲಕೊಪ್ಪ 100, ಬನವಾಸಿ 100, ನಗರದ ಬಿ.ಆರ್ ಅಂಬೇಡ್ಕರ್ ಭವನದಲ್ಲಿ 600 ಡೋಸ್ ಲಸಿಕೆ ದೊರೆಯಲಿದೆ.