ಗೋಕರ್ಣ: ಕೊರೋನಾ ಲಾಕ್ ಡೌನ್ ಸಡಿಲವಾಗುತ್ತಿರುವಂತೆ ಉತ್ತರಕನ್ನಡದ ಪ್ರಮುಖ ಸ್ಥಳಗಳಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರು, ಎಚ್ಚರಿಕೆಯನ್ನು ಮೀರಿ ನೀರಿನಲ್ಲಿ ಮೋಜು ಮಸ್ತಿ ಮಾಡಲು ಹೋಗಿ, ಪ್ರಾಣಕ್ಕೆ ಅಪಾಯ ತಂದಿಕೊಳ್ಳುತ್ತಿರುವ ಪ್ರಕರಣ ಹೆಚ್ಚುತ್ತಿದೆ.

ಗೋಕರ್ಣದಲ್ಲಿ ಕುಡ್ಲೆ ಬೀಚ್ ಗೆ ಬಂದ ಯುವಕನೊಬ್ಬ ಬೀಚ್ ನಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿ, ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಬಿದ್ದಿದ್ದಾನೆ. ಈ ವೇಳೆ ಸುಳಿಗೆ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಈತನನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

RELATED ARTICLES  ಕ್ಷತ್ರಿಯ ಕೋಮಾರಪಂಥ ಸಮಾಜದ 'ಧರ್ಮಸಭೆ' & 'ಸಾರ್ವಭೌಮ ವಿದ್ಯಾರ್ಥಿ ವೇತನ' ವಿತರಣೆ

ನೀರಿನಲ್ಲಿ ಬಿದ್ದು ಅಸ್ವಸ್ಥಗೊಂಡ ಯುವಕನನ್ನು ಆಂಧ್ರಪ್ರದೇಶದ ಪ್ರಸಾದ್ ಎಂದು ಗುರುತಿಸಲಾಗಿದೆ. ಈಗ ಕುಟುಂಬದವರೊoದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದ ಎಂಬ ಮಾಹಿತಿ ಲಭಿಸಿದೆ. ಅಸ್ವಸ್ಥಗೊಂಡ ಯುವಕನನ್ನು ಪ್ರಥಮ ಚಿಕಿತ್ಸೆ ನೀಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES  Financial Process Automation Using Rpa