ಕಾರವಾರ : ಕರೋನಾ ಆರ್ಭಟ ಕಡಿಮೆಯಾಗಿದ್ದರೂ, ಉತ್ತರಕನ್ನಡದಲ್ಲಿ 50ಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವುದು ಜನರು ಎಚ್ಚರಿಕೆವಹಿಸಬೇಕು ಎನ್ನುವ ಕಿವಿಮಾತು ಹೇಳಿದಂತಿದೆ.
ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ನ ಪ್ರಕಾರ ನಿನ್ನೆ 57 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ.
ಇಂದಿನ ಹೆಲ್ತ ಬುಲೆಟಿನ್ ಒಟ್ಟೂ ೧ ಸಾವು ಸಂಭವಿಸಿದ್ದು ಕಾರವಾರದಲ್ಲಿ ಕೊರೋನಾ ಕಾರಣದಿಂದ ಒಂದು ಸಾವು ಸಂಭವಿಸಿದೆ. ಉತ್ತರ ಕನ್ನಡದಲ್ಲಿ ಈ ಮೂಲಕ ಒಟ್ಟು ಸಾವಿಗೀಡಾದವರ ಸಂಖ್ಯೆ 724 ಕ್ಕೆ ಏರಿಕೆಯಾಗಿದೆ.
ಹೆಲ್ತ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 16, ಅಂಕೋಲಾದಲ್ಲಿ 4, ಕುಮಟಾದಲ್ಲಿ 11, ಹೊನ್ನಾವರ 8, ಭಟ್ಕಳದಲ್ಲಿ 2, ಶಿರಸಿಯಲ್ಲಿ 6, ಸಿದ್ದಾಪುರದಲ್ಲಿ 3, ಯಲ್ಲಾಪುರದಲ್ಲಿ 4, ಮುಂಡಗೋಡ 2, ಹಳಿಯಾಳದಲ್ಲಿ 1, ಮತ್ತು ಜೋಯಿಡಾದಲ್ಲಿ 0 ಒಟ್ಟೂ 57 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 348 ಆಗಿದ್ದು, ಅವರಲ್ಲಿ 46 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 302 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.
ಕಾರವಾರ 8, ಅಂಕೋಲಾ 10, ಕುಮಟಾ 14, ಹೊನ್ನಾವರ 2, ಭಟ್ಕಳ 3, ಶಿರಸಿ 3, ಸಿದ್ದಾಪುರ 1, ಯಲ್ಲಾಪುರ 4, ಮುಂಡಗೋಡ 3, ಹಳಿಯಾಳ 0, ಜೋಯ್ಡಾ 0 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 48 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.
ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ ಕಾರವಾರ ಅತಿ ಹೆಚ್ಚು ಅಂದರೆ 16 ಜನರಲ್ಲಿ ಕುಮಟಾ ಎರಡನೆಯ ಸ್ಥಾನ ಅಂದರೆ 11 ಜನರಲ್ಲಿ ಕರೋನಾ ಕಾಣಿಸಿಕೊಂಡಿದೆ. ಕುಮಟಾದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಸ್ಕ ಧರಿಸದೆ ಇದ್ದವರಿಗೆ ಟೆಸ್ಟ್ ಮಾಡಲಾಗಿದೆ.
ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.