ಶಿರಸಿ: ಮಳೆಗಾಲದ ಅವಾಂತರ ಎಂಬಂತೆ ಎಲ್ಲೆಡೆ ಸೇತುವೆಗಳು ರಸ್ತೆಗಳು ಸಮಸ್ಯೆಯಾಗಿ ಪರಿಣಮಿಸಿದೆ ಇನ್ನೊಂದು ಸ್ಥಳಕ್ಕೆ ಓಡಾಟ ನಡೆಸುವುದೇ ಕಷ್ಟ ಎಂಬ ಸ್ಥಿತಿಯಿದ್ದು, ಇದಕ್ಕಿಂತ ಭಿನ್ನವಲ್ಲದ ಪರಿಸ್ಥಿತಿ ಕುಮಟಾ ಶಿರಸಿ ಹೆದ್ದಾರಿಯದ್ದು.

ಕಾಮಗಾರಿ ಪ್ರಗತಿಯಲ್ಲಿದ್ದು, ದುರವಸ್ಥೆಯಲ್ಲಿರುವ ಶಿರಸಿ-ಕುಮಟಾ ಹೆದ್ದಾರಿಯಲ್ಲಿ ಭಾರಿ ಗಾತ್ರದ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದ್ದು, ಸವಾರರು ಒಳರಸ್ತೆಗಳನ್ನು ಅವಲಂಬಿಸುತ್ತಿದ್ದಾರೆ.

ತೀರಾ ಇಕ್ಕಟ್ಟಾದ ಮಳಲಿ ರಸ್ತೆ, ಹತ್ತರಗಿ ರಸ್ತೆ, ಅಡಕಳ್ಳಿ ರಸ್ತೆ ಮುಂತಾದೆಡೆ ಲಾರಿ, ಬಸ್ಸುಗಳ ಓಡಾಟ ಹೆಚ್ಚುತ್ತಿದೆ. ನಿರಂತರ ಮಳೆಗೆ ಹದಗೆಟ್ಟಿದ್ದ ಗ್ರಾಮೀಣ ರಸ್ತೆಗಳ ಸ್ಥಿತಿ ಮತ್ತಷ್ಟು ಹಾಳಾಗುತ್ತಿದೆ. ಗ್ರಾಮಸ್ಥರಿಗೆ ಅಪಘಾತದ ಭಯವೂ ಕಾಡುತ್ತಿದೆ.

RELATED ARTICLES  ಭಟ್ಕಳ ತಾಲೂಕಾ ಮಟ್ಟದ ಭಗವದ್ಗೀತಾ ಸ್ಪರ್ಧೆಗಳು ಸಂಪನ್ನ

ನಿರಂತರ ಮಳೆಗೆ ಶಿರಸಿ-ಕುಮಟಾ ಹೆದ್ದಾರಿ ಕಾಮಗಾರಿಗೆ ಹಾಕಲಾದ ಮಣ್ಣು ಮೆತ್ತಗಾಗಿದ್ದು, ಅದರ ಮೇಲೆ ಹಾಸಲಾಗಿದ್ದ ಜಲ್ಲಿ ರಾಶಿ ಹೂತುಹೋಗಿವೆ. ಕರಾವಳಿ ಭಾಗದ ಪಟ್ಟಣಗಳಿಗೆ ತೆರಳಬೇಕಿರುವ ಲಾರಿಗಳು ಇದೇ ಮಾರ್ಗದಲ್ಲಿ ಸಾಗಿವೆ. ಭಾರದ ವಾಹನಗಳ ಓಡಾಟದ ಪರಿಣಾಮ ರಸ್ತೆ ಸ್ಥಿತಿ ದುರವಸ್ಥೆಗೆ ತಲುಪಿ ಹಲವು ವಾಹನಗಳು ಹೂತುಹೋಗಿದ್ದವು.

RELATED ARTICLES  ಯುವ ಮತದಾರರ ಕೈಯಲ್ಲಿ ದೇಶದ ಭವಿಷ್ಯವಿದೆ: ಜಿಲ್ಲಾಧಿಕಾರಿ ನಕುಲ್

ಈ ಎಲ್ಲ ಸಮಸ್ಯೆಗಳಿಗೆ ಅಗತ್ಯ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. ಅದೇನೇ ಇದ್ದರೂ ವಾಹನ ಸವಾರರಿಗೆ ಇದರಿಂದ ಕಿರಿಕಿರಿ ಉಂಟಾಗುತ್ತಿದ್ದು, ಸವಾರರ ನಿತ್ಯ ಬವಣೆ ಹೇಳತೀರದು.