ಕಾರವಾರ : ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದು ಪ್ರವಾಹದ ತೀವ್ರತೆ ಎದುರಿಸಿ ಹೈರಾಣಾಗಿರುವ ಉತ್ತರಕನ್ನಡದ ಜನರ ಪರಿಸ್ಥಿತಿ ಅವಲೋಕಿಸಲಿದ್ದಾರೆ.

ಸಿ.ಎಂ ಕಾರ್ಯಾಲಯದಿಂದ, ಮುಖ್ಯಮಂತ್ರಿಗಳ ತಾತ್ಕಾಲಿಕ ಪ್ರವಾಸ ಪಟ್ಟಿ ಸಿದ್ಧಗೊಳಿಸಿ ಬಿಡುಗಡೆ ಮಾಡಲಾಗಿದೆ. ಸಿಎಂ ಪ್ರವಾಸದ ವಿವರ ಯಾವ ರೀತಿ ಇರಲಿದೆ ಎಂಬ ಬಗ್ಗೆ ಪ್ರಮುಖ ಅಂಶಗಳು ಎಲ್ಲಿದೆ.

ಜುಲೈ 29ರ ಬೆಳಿಗ್ಗೆ 9:30 ಕ್ಕೆ ಬೆಂಗಳೂರಿನ ಎಚ್ಎಎಲ್ ನಿಂದ್ ವಿಶೇಷ ವಿಮಾನದ ಮೂಲಕ ಹೊರಟು, 10.30ಕ್ಕೆ ಹುಬ್ಬಳ್ಳಿ ತಲುಪಲಿದ್ದಾರೆ.ಅಲ್ಲಿಂದ ಹೆದ್ದಾರಿ ಮಾರ್ಗವಾಗಿ ಹೊರಟು 11, 45ಕ್ಕೆ ಯಲ್ಲಾಪುರ ತಲುಪಲಿದ್ದಾರೆ. ಯಲ್ಲಾಪುರದಲ್ಲಿ ನೆರೆ ಪೀಡಿತ ಪ್ರದೇಶ ಹಾಗೂ ರಾಷ್ಟ್ರೀಯ ಹೆದ್ದಾರಿ ಕುಸಿತದ ಪ್ರದೇಶ ಮತ್ತು ಕೊಚ್ಚಿಹೋದ ಗುಳ್ಳಾಪುರ ಸೇತುವೆ ವೀಕ್ಷಿಸಲಿದ್ದಾರೆ.

RELATED ARTICLES  ಲೋಕಾಯುಕ್ತ, ಎಸಿಬಿಯಲ್ಲಿ ಬಿಜೆಪಿಯಿಂದ ದೂರು ದಾಖಲು : ಜಾರ್ಜ್ ಗೆ ,ಮಾಜಿ ಸಿಎಂ ಸಿದ್ದು.. ಬಿಗ್ ಶಾಕ್!

ನಂತರ ಕಾರವಾರ – ಅಂಕೋಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ ಹಾನಿಗೊಳಗಾದ ಕೆಲ ಪ್ರದೇಶಗಳ ವೀಕ್ಷಣೆ, ಕಾಳಜಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2:00 ಗಂಟೆ ಇಂದ 3.00 ರ ವರೆಗೆ ಅಂಕೋಲಾದ ನಾಡವರ ಸಮುದಾಯಭವನದಲ್ಲಿ ಶಾಸಕರು, ಸಂಸದರು ಹಾಗೂಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಉಕ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಲಿದ್ದಾರೆ.

ಅಂಕೋಲದಿಂದ ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ಪುನಃ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ.

RELATED ARTICLES  ಅರಿಶಿಣ ನೀರು ಆರಿರಲಿಲ್ಲ. ಆಗಲೇ ಅಪಘಾತ ಸಂಭವಿಸಿ ಮೃತಪಟ್ಟ ವರ.

ಮುಖ್ಯಮಂತ್ರಿಗಳ ಕಾರ್ಯಕ್ರಮ ಪಟ್ಟಿಯಲ್ಲಿ ಅಂಕೋಲಾದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಜಿಲ್ಲಾ ಮಟ್ಟದ ಸಭೆ ಎಂದು ನಮೂದಿಸಲಾಗಿದ್ದು,ಅನಿವಾರ್ಯ ಕಾರಣಗಳಿಂದ ಅದನ್ನು ಮಾರ್ಪಡಿಸಿ,ಜಿಲ್ಲಾಡಳಿತದ ನಿರ್ದೇಶನದಲ್ಲಿ ಸ್ಥಳೀಯ ಅಧಿಕಾರಿಗಳು ನಾಡವರ ಸಮುದಾಯಭವನದಲ್ಲಿ ಹಮ್ಮಿಕೊಳ್ಳಲು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ ವರದಿಯಾಗಿದೆ.

ನೂತನ ಮುಖ್ಯಮಂತ್ರಿಗಳ ಆಗಮನ ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಲ್ಲಿ ಹೊಸ ಭರವಸೆ ಮೂಡಿಸಿದೆ. ಕಳೆದ ಮೂರು ಬಾರಿಯೂ ಮುಖ್ಯಮಂತ್ರಿಗಳ ಪ್ರವಾಸದ ಪಟ್ಟಿ ಅಂತಿಮ ಕ್ಷಣದಲ್ಲಿ ಬದಲಾಗಿತ್ತು, ಇದೀಗ ಮುಖ್ಯಮಂತ್ರಿ ಆಗಮಿಸುತ್ತಿರುವುದು ಜನರ ಸಂತೋಷಕ್ಕೂ ಕಾರಣವಾಗಿದೆ.