ಶಿರಸಿ: ವ್ಯಕ್ತಿಯನ್ನು ನಂಬಿಸಿ ಒಟ್ಟು 2 ಲಕ್ಷದ 91 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡು ವಂಚಿಸಲಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ಯಾಂಕ್ ಖಾತೆಗೆ ಕೆವೈಸಿ ಅಪಡೇಟ್ ಮಾಡಬೇಕೆಂದು ನಂಬಿಸಿ ವ್ಯಕ್ತಿಯೋರ್ವ ಖಾತೆಯಿಂದ ಹಣ ಎಗರಿಸಿದ ಘಟನೆ ಇದಾಗಿದ್ದು, ತಾಲೂಕಿನಲ್ಲಿ ನಡೆದಿರುವ ಘಟನೆ ಇದೀಗ ಸದ್ದು ಮಾಡುತ್ತಿದೆ.

ತಾಲೂಕಿನ ಪುಟ್ಟನಮನೆ ನಿವಾಸಿ ಪರಮೇಶ್ವರ ಅನಂತ ಭಟ್ಟ ಮೋಸ ಹೋದ ವ್ಯಕ್ತಿ. ನಾನು ಎಸ್ ಬಿಐ ಅಧಿಕಾರಿ. ನಿಮ್ಮ ಖಾತೆಯ ಕೆವೈಸಿ ಅಪ್‌ಡೇಟ್ ಮಾಡಬೇಕು. ಇಲ್ಲದಿದ್ರೆ ನಿಮ್ಮ ಖಾತೆ ಬ್ಲಾಕ್ ಆಗುತ್ತದೆ ಎಂದು ಹೆದರಿಸಿ, ಪರಮೇಶ್ವರ ಅನಂತ ಭಟ್ಟ ಅವರಿಂದ ಓಟಿಪಿ ಪಡೆದು ಮೋಸ ಮಾಡಲಾಗಿದೆ.

RELATED ARTICLES  ಹೊನ್ನಾವರ ರೋಟರಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ತಾನು ಬ್ಯಾಂಕ್ ಅಧಿಕಾರಿ ಎಂದು ಹೇಳಿದ ವ್ಯಕ್ತಿಯ ಮಾತನ್ನು ನಂಬಿದ ಪರಮೇಶ್ವರ ಭಟ್ಟ ಅವರು ತಮ್ಮ ಬ್ಯಾಂಕ್ ಖಾತೆ ನಂಬರ್ ನೀಡಿದ್ದಾರೆ. ಅಲ್ಲದೆ, ಓಟಿಪಿ ನಂಬರ್ ಕೂಡಾ ಕೊಟ್ಟಿದ್ದಾರೆ. ಬಳಿಕ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ಮೋಸ ಹೋಗಿರುವುದು ತಿಳಿದುಬಂದಿದೆ.

RELATED ARTICLES  ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು : ಡಾ|| ವಿ. ಎನ್. ನಾಯ್ಕ

ಈ ರೀತಿ ಪ್ರಕರಣಗಳು ಪುನರಾವರ್ತನೆ ಆಗುತ್ತಿದ್ದು, ಜನರು ಈ ರೀತಿಯ ಕರೆಗಳನ್ನು ನಂಬಿ ಮೋಸ ಹೋಗುತ್ತಿರುವ ಬಗ್ಗೆ ಅಧಿಕಾರಿಗಳೂ ಬೇಸರ ವ್ಯಕ್ತಪಸಿದ್ದಾರೆ. ಜನತೆ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದೆ ಎನ್ನಲಾಗಿದೆ.