ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಅವರನ್ನು ಹತ್ಯೆ ಮಾಡಲಾಗಿದೆ. ಮನೆಯ ಹೊರಗಡೆ ನಿಂತಿದ್ದ ಗೌರಿ ಲಂಕೇಶ ಅವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ RR ನಗರದ ಅವರ ನಿವಾಸದಲ್ಲಿ ಇರುವ ಸಂದರ್ಭದಲ್ಲಿ ಅವರ ಮೇಲೆ 3ಸುತ್ತಿನ ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.

RELATED ARTICLES  ಬೇಗನೆ ಪರೀಕ್ಷಾಕೇಂದ್ರ ತಲುಪಲು ಅಂಬುಲೆನ್ಸ ಬಳಸಿದ ವಿದ್ಯಾರ್ಥಿಗಳು!

ತನ್ನದೇ ಆದ ಸೈಧಾಂತಿಕ ನಿಲುವು ಹಾಗೂ ತನ್ನದೇ ಪ್ರಖರತೆಯ ಬರಹಗಳಿಂದ ಇವರು ಬೆಳಕಿಗೆ ಬಂದಿದ್ದರು. ಅವರು ಮನೆಯಲ್ಲಿ ಇರುವ ಸಂದರ್ಭದಲ್ಲಿ ಮನೆಯ ಬಾಗಿಲು ಬಡಿದ ದುಷ್ಕರ್ಮಿಗಳು ಅವರು ಬಾಗಿಲು ತೆರೆದ ಕೂಡಲೇ ಗುಂಡಿನ ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ.

RELATED ARTICLES  ವ್ಯಕ್ತಿಯ ಮರ್ಮಾಂಗವನ್ನು ಕತ್ತರಿಸಿ ತಲೆ ಹಾಗೂ ಕುತ್ತಿಗೆಗೆ ಮೊಳೆ ಹೊಡೆದು ವಿಕೃತವಾಗಿ ಕೊಲೆ.

ಹಿರಿಯ ಪತ್ರಕರ್ತರ ಈ ಸಾವನ್ನು ಸಿ ಬಿ ಐ ಗೆ ಒಪ್ಪಿಸಲು ಆಗ್ರಹ ಕೇಳಿ ಬಂದಿದೆ. ಹತ್ಯೆಗೆ ಕಾರಣ ತಿಳಿದುಬಂದಿಲ್ಲ .ಹೆಚ್ಚಿನ ತನಿಖೆಯ ನಂತರ ಸತ್ಯಾಸತ್ಯತೆ ಹೊರಬರಬೇಕಿದೆ.