ಹುಬ್ಬಳ್ಳಿ: ನೂತನ ಸಿಎಂ ಬಸವರಾಜ ಬೊಮ್ಮಾಯಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಭೇಟಿ ನೀಡಿದ ಹಿನ್ನಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಕಾರು ಅಪಘಾತವಾಗಿದೆ.

ಸಿಎಂ ಬೆಂಗಾವಲು ವಾಹನಕ್ಕೆ ಮಾಜಿ ಸಚಿವರ ಕಾರು ಗುದ್ದಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸಿಎಂ ಹೊರ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಆದರೆ ಮಾಜಿ ಸಚಿವ
ಶಿವರಾಮ ಹೆಬ್ಬಾರ, ಸಿಎಂ ಕಾರಿನಲ್ಲಿದ್ದರು ಎನ್ನಲಾಗಿದೆ.

RELATED ARTICLES  ಕರ್ನಾಟಕ ಬಜೆಟ್ 2019: ಬಜೆಟ್ ಮಂಡಿಸಿದ ಸಿ.ಎಂ ಕುಮಾರಸ್ವಾಮಿ.

ಅಲ್ಲದೆ ಹೆಬ್ಬಾರ್ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಎಂ ಕಾರು ಹಿಂಬಾಲಿಸುವ ಭರದಲ್ಲಿ ಆಪಘಾತ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದು, ಪೂರ್ಣ ಮಾಹಿತಿ ಬರಬೇಕಿದೆ. ಅದಲ್ಲದೆ ಇದು ಹೆಬ್ಬಾರ್ ಅವರ ಕಾರು ಅಲ್ಲ ಎಂಬ ಮಾತುಗಳೂ ಕೇಳಿ ಬರುತ್ತಲಿದೆ.

RELATED ARTICLES  ನಾಳೆ ಬೆಂಗಳೂರು ಬಂದ್; ಶಾಲಾ ಕಾಲೇಜ್ ಗಳಿಗೆ ರಜೆ, ಬಿಎಂಟಿಸಿ ಡೌಟ್, ಮೆಟ್ರೋ ಇರುತ್ತೆ