ಕುಮಟಾ: ಸ್ಮಿತಾ ರಾಘವೇಂದ್ರ ಅವರ ‘ಕನಸು ಕನ್ನಡಿ’ ಗಜಲ್ ಸಂಕಲನಕ್ಕೆ ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನವು ನೀಡುವ ಸಾಹಿತ್ಯ ಶರಭ ಪ್ರಶಸ್ತಿಯು ಲಭಿಸಿದೆ. ಕನ್ನಡ ಪುಸ್ತಕ ಪ್ರಧಿಕಾರದಿಂದ ಇವರ ಚೊಚ್ಚಲ ಕೃತಿ ಆಯ್ಕೆ ಆಗಿದ್ದಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

RELATED ARTICLES  ಶಾಲೆ ಹಾಗೂ ಅಂಚೆ ಕಚೇರಿ ಬೀಗ ಮುರಿದು ಕಳ್ಳತನಕ್ಕೆ ಯತ್ನ

ತುಮಕೂರಿನಲ್ಲಿ ನಡೆಯುವ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದ ಸಾಹಿತಿಗಳು ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಗುರುಕುಲ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಶ್ರೀ ಹುಲಿಯೂರುದುರ್ಗ ನಾರಾಯಣ್ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಕೊಂಕಣ ಎಜ್ಯುಕೇಶನ ಟ್ರಸ್ಟ್ ಕುಮಟಾದ ಸಿ ವಿ ಎಸ್ ಕೆ ಹೈಸ್ಕೂಲ್ ನಲ್ಲಿ ವಿಜಯೋತ್ಸವ ಆಚರಣೆ

ಇವರು ಅಂಕೋಲಾ ತಾಲ್ಲೂಕಿನ ಡೊಂಗ್ರಿ ಗ್ರಾಮ ಪಂಚಾಯ್ತಿಯ ಕಲ್ಲೇಶ್ವರ ಗ್ರಾಮದವರು. ಈಗಾಗಲೇ ರಾಜ್ಯಮಟ್ಟದ ಪತ್ರಿಕೆಗಳಲ್ಲಿ, ಮ್ಯಾಗಜಿನ್ ಗಳಲ್ಲಿ ನೂರಾರು ಲೇಖನಗಳನ್ನು ಬರೆದು ಗುರುತಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿ ಜಿಲ್ಲೆ, ಹೊರಜಿಲ್ಲೆಗಳಲ್ಲಿ ಹೆಸರು ಮಾಡಿದ್ದಾರೆ.