ಉತ್ತರ ಕನ್ನಡದ ಪ್ರಮುಖ ತಾಲ್ಲೂಕುಗಳಾದ ಕುಮಟಾ ಮತ್ತು ಹೊನ್ನಾವರ ಶಿರಸಿಯಲ್ಲಿ ಕೋರೋನ ವ್ಯಾಕ್ಸಿನೇಷನ್ ಪ್ರಕ್ರಿಯೆಗಳು ನಡೆಯುತ್ತಿವೆ. ಸರ್ಕಾರದ ಮಾರ್ಗಸೂಚಿಯಂತೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಾಗೂ ಎರಡನೇ ಡೋಸ್ ಪಡೆಯುವವರಿಗೆ ಮಾತ್ರವೇ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.
ಹೊನ್ನಾವರ ತಾಲೂಕಿನಲ್ಲಿ ಎಲ್ಲೆಲ್ಲಿ?
ನಾಳೆ ಹೊನ್ನಾವರ ತಾಲೂಕು ಆಸ್ಪತ್ರೆಯಲ್ಲಿ 200 ಜನರಿಗೆ, ಹಳದೀಪುರ 200, ಮಂಕಿಯಲ್ಲಿ 300, ಬಳ್ಕೂರು 200, ಸಂಶಿಯಲ್ಲಿ 200, ಗೇರುಸೊಪ್ಪಾದಲ್ಲಿ 100 ಜನರಿಗೆ ಲಸಿಕೆ ಲಭ್ಯವಿದ್ದು ಇದು ಕೇವಲ ಎರಡನೇ ಪಡೆಯುವವರಿಗೆ ಮಾತ್ರವಾಗಿದೆ.
ಆರೋಗ್ಯ ಇಲಾಖೆಯವರು ಎರಡನೇ ಡೋಸ್ ಪಡೆಯುವವರಿಗೆ ಮಾತ್ರವೇ ಈ ವ್ಯಾಕ್ಸೀನ್ ನೀಡುತ್ತಿದ್ದು, ಇಲಾಖೆಯವರು ಫೋನ್ ಮೂಲಕ ಸಂಪರ್ಕಿಸಿದ ವ್ಯಕ್ತಿಗಳು ಮಾತ್ರವೇ ಸ್ಥಳದಲ್ಲಿ ಹಾಜರಿದ್ದು ವ್ಯಾಕ್ಸೀನ್ ಪಡೆಯಲು ಸೂಚಿಸಿದ್ದಾರೆ. ಫೋನ್ ಮೂಲಕ ಮಾಹಿತಿ ನೀಡಲಾದವರು ಮಾತ್ರವೇ ಹಾಜರಿರುವಂತೆ ಹಾಗೂ ಅನಗತ್ಯವಾಗಿ ಜನರು ಗೊಂದಲ ಮಾಡಿಕೊಳ್ಳದಂತೆ ಇಲಾಖೆಯಿಂದ ವಿನಂತಿಸಿದ್ದು, ಎಲ್ಲರಿಗೂ ಲಭ್ಯವಾಗುವಂತೆ ಹಂತ ಹಂತದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿಯಲ್ಲಿ ತಿಳಿಸಲಾಗಿದೆ.
ಕುಮಟಾ ತಾಲೂಕಿನ ವಿವರ
ಕುಮಟಾ ತಾಲೂಕಿನಲ್ಲಿ ನಾಳೆ ಕೋವೀಶೀಲ್ಡ ಲಸಿಕೆಯು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ 150, ಗೋಕರ್ಣ 100, ಹಿರೇಗುತ್ತಿ 100, ಮಾಸೂರು 150, ಗುಡೇಅಂಗಡಿ 200, ಯಲವಳ್ಳಿ 100, ಸಂತೇಗುಳಿ 100, ಹೊನ್ಮಾವ್ 130, ಹೆಗಲೆ 100 ಲಸಿಕೆ ಲಭ್ಯವಿದ್ದು ಇದು ಕೇವಲ ಎರಡನೇ ಡೋಸ್ ಪಡೆಯುವವರಿಗೆ ಮಾತ್ರವಾಗಿದೆ.
ಇನ್ನುಳಿದಂತೆ ಕೋ ವ್ಯಾಕ್ಸಿನ್ ಕುಮಟಾದಲ್ಲಿ 200 ಜನರಿಗೆ ಮಾತ್ರ ಲಭ್ಯವಿದ್ದು ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್ ಸಮೀಪವಿರುವ ಪುರಭವನದಲ್ಲಿ ಲಸಿಕಾಕರಣ ಕಾರ್ಯಕ್ರಮ ನಡೆಯಲಿದೆ. ಇದು ಕೇವಲ ಎರಡನೇ ಡೋಸ್ ಪಡೆಯುವವರಿಗೆ ಮಾತ್ರವಾಗಿದೆ.
ಶಿರಸಿಯಲ್ಲಿ ನೀಡುವ ವ್ಯಾಕ್ಸಿನ್ ಮಾಹಿತಿ
ತಾಲೂಕಿನಲ್ಲಿ ಕೊರೊನಾ ವ್ಯಾಕ್ಸಿನ್ ವಿತರಣೆಗೆ ಕ್ಯಾಂಪ್‍ಗಳನ್ನು ಆಯೋಜಿಸಿ ನೀಡಲಾಗುತ್ತಿದ್ದು, ಜು.30 ಶಿರಸಿ ತಾಲೂಕಿನಲ್ಲಿ ಒಟ್ಟೂ 1,500 ಡೋಸ್ ಕೋವಿಶೀಲ್ಡ್ ಲಸಿಕೆಯಿದ್ದು, ಅದನ್ನು 2 ನೇ ಡೋಸ್ ಬಾಕಿಯಿರುವವರಿಗೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಒಟ್ಟೂ 1500 ಡೋಸ್ ಲಸಿಕೆಯಲ್ಲಿ ಶಿರಸಿ ನಗರದ ವಾರ್ಡ್ – 16, ವಾರ್ಡ್ – 17, ವಾರ್ಡ್ – 21, ವಾರ್ಡ್ – 22 ನ ನಿವಾಸಿಗಳಿಗೆ ಪ್ರತಿ ವಾರ್ಡ್ ಗೆ ತಲಾ 100 ಲಸಿಕೆಯಂತೆ 400 ಲಸಿಕೆಯನ್ನು ಹುಬ್ಬಳ್ಳಿ ರಸ್ತೆಯಲ್ಲಿನ ಆಯುಷ್ ಆಸ್ಪತ್ರೆ (ಕೋಟೆಕೆರೆ) ಸಮೀಪವಿರುವ ಬಿ ಆರ್ ಅಂಬೇಡ್ಕರ್ ಭವನದಲ್ಲಿ ನೀಡಲಾಗುತ್ತದೆ.
300 ಲಸಿಕೆಯನ್ನು ಯಲ್ಲಾಪುರ ರಸ್ತೆಯಲ್ಲಿರುವ (ಡೆವಲಪ್ಮೆಂಟ್ ಪೆಟ್ರೋಲ್ ಬಂಕ್ ಎದುರು) ಡಾ. ಬಿ ಆರ್ ಅಂಬೇಡ್ಕರ ಭವನದಲ್ಲಿ ನೀಡಲಾಗುವುದು.
ಇನ್ನುಳಿದಂತೆ ತಾಲೂಕಿನ ದಾಸನಕೊಪ್ಪದಲ್ಲಿ 200, ಬಿಸಲಕೊಪ್ಪ 200, ಹುಲೇಕಲ್ 200, ಹೆಗಡೆಕಟ್ಟಾ 200 ಡೋಸ್ ವ್ಯಾಕ್ಸಿನ್ ಸೌಲಭ್ಯ ದೊರೆಯಲಿದೆ.
ಭಟ್ಕಳ ತಾಲೂಕಿನಲ್ಲಿ ಎಲ್ಲೆಲ್ಲಿ?
ಭಟ್ಕಳ ತಾಲೂಕಾಸ್ಪತ್ರೆಯಲ್ಲಿ 300 , ಶಿರಾಲಿ ಸಮುದಾಯ ಆರೋಗ್ಯ ಕೇಂದ್ರ 300 , ಮುರುಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರ 60 , ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರ 40 , ಬೆಳಕೆ ಪ್ರಾಥಮಿಕ ಆರೋಗ್ಯ ಕೇಂದ್ರ 100 , ಕೋಣಾರ ಪ್ರಾಥಮಿಕ ಆರೋಗ್ಯ ಕೇಂದ್ರ 100 , ಅನಿವಾಸಿ ಭಾರತೀಯರಿಗೆ 300 ಸೇರಿ ಒಟ್ಟು ತಾಲ್ಲೂಕಿನಾದ್ಯಂತ ನಾಳೆ 1200 ಕೋವಿಡ್ ಲಸಿಕೆ ಲಭ್ಯವಿದೆ.