ಕುಮಟಾ :  ತಾಲ್ಲೂಕಿನ ಹೊಳೆಗದ್ದೆ ಟೊಲ್ ಬಳಿ ಇನ್ನೂರಕ್ಕೂ ಹೆಚ್ಚು  ಲಾರಿಗಳು ನಿಂತಿದ್ದು ಎಲ್ಲ ಚಾಲಕರಿಗೆ ಆರು ದಿನಗಳಿಂದ ಊಟ ತಿಂಡಿ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ, ಇಂದು ಆ ಚಾಲಕರಿಗೆ ಊಟ ಬಡಿಸುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಾದ ಕುಮಟಾ ಹಾಗೂ ಹೊನ್ನಾವರ ಪಿಎಸ್ಐ ಗಳಾದ ಶ್ರೀ ಆನಂದಮೂರ್ತಿ ರವರು ಹಾಗೂ ಶಶಿಕುಮಾರ್ ಅವರು ಹಾಜರಿದ್ದು ಊಟ ಬಡಿಸುವ ಕಾರ್ಯದಲ್ಲಿ ಕೈಜೋಡಿಸಿ ಸರಳತೆ ಮೆರೆದಿದ್ದಾರೆ ಜನಮೆಚ್ಚುಗೆ ಪಡೆದಿದೆ.

    ಈ ಬಗ್ಗೆ ಅನಿಸಿಕೆ ಹಂಚಿಕೊಂಡ ದೇವಗಿರಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಎಸ್ ಟಿ ನಾಯ್ಕ ಕಳೆದ ವಾರ  ಸುರಿದ ಭಾರಿ ಮಳೆಗೆ ಜಿಲ್ಲೆಯಾದ್ಯಂತ ನದಿಗಳು ಉಕ್ಕಿ ಹರಿದಿದ್ದು ಅನೇಕ ಕಡೆ ಗುಡ್ಡಗಳು ಕುಸಿದ ರಸ್ತೆ ಸಂಚಾರ ಕಡಿತಗೊಂಡಿದೆ. ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿ ಕಡೆ ಸಂಚರಿಸುವ ರಸ್ತೆ ಬಂದ್ ಆಗಿದೆ.

ಶಿರಸಿ ಮಾರ್ಗವಾಗಿ ತೆರಳುವ ರಸ್ತೆ ಕೂಡ ತುಂಬಾ ಹದಗೆಟ್ಟಿದ್ದು ಭಾರಿ ಸರಕು ವಾಹನ ಸಂಚಾರ ನಿಂತಿದೆ ಗುಡ್ಡ ಕುಸಿತದ ಕಾರಣದಿಂದ ಮತ್ತು ರಸ್ತೆ ಕೊಚ್ಚಿ ಹೋಗಿರುವುದರಿಂದ  ಮಂಗಳೂರು ಕಡೆಯಿಂದ ಬಂದಿರುವ ಸಾಮಾನ್ಯ 300 ಕ್ಕೂ ಹೆಚ್ಚು ಲಾರಿ ಗಳು ಹೊಳೆಗದ್ದೆ ಟೊಲ್ ಬಳಿ ನಿಂತಿದೆ..ಅವರಿಗೆ ಊಟ ತಿಂಡಿ ಹಾಗೂ ನೀರಿನ ಸಮಸ್ಯೆ ಉಂಟಾಗಿತ್ತು ನಂತರ ನಾನು ಹಾಗೂ ನಮ್ಮ ಮಿತ್ರರು ಹಾಗೂ ಪ್ರಮುಖ ದಾನಿಗಳು ಮತ್ತು IRB ಅಧಿಕಾರಿಗಳು ಮಾತನಾಡಿಕೊಂಡು ಪ್ರತಿದಿನ  ಆ ಎಲ್ಲ ಚಾಲಕರಿಗೆ ಊಟ ತಿಂಡಿ ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ. ಈ ಕಾರ್ಯಕ್ಕೆ ಬಾಲಕ್ರಷ್ಣ ಬಾಳೆರಿ, ಸುಬ್ರಮಣ್ಯ ಉಡದಂಗಿ, ಕುಮಟಾ ಪಿಎಸ್ಐ ಆನಂದಮೂರ್ತಿ, ಪಿಎಸ್ಐ ಶಶಿಕುಮಾರ್ ಹೊನ್ನಾವರ, ದೇವಗಿರಿ ವೀಪತ್ತು ಘಟಕದ ಅಧ್ಯಕ್ಷ ಮಾದೇವ ಪಟಗಾರ ಹಾಗೂ ಸದಸ್ಯರು , ಪಾಂಡು ಪಟಗಾರ, ರಾಜು ನಾಯ್ಕ, ಬಷೀರ್, ಸುರೇಶ್ ಶೇಟ್ಟಿ ಹಾಗೂ IRB ಯವರು ಸಹಕಾರ ನೀಡಿದ್ದಾರೆ ಎಂದರು.

ನಾವೂ ಕೂಡ ಬೇರೆ ಕಡೆ ಹೋದಾಗ ಇಂಥಹ ಪರಿಸ್ಥಿತಿ ಬಂದಾಗ ಆ ಕಷ್ಟ ಏನಂತ ಗೊತ್ತು ಆದ್ದರಿಂದ ಅವರಿಗೆ ಈ ವ್ಯವಸ್ಥೆ ಮಾಡಿದ್ದೇವೆ.
ನಮ್ಮ ಕುಮಟಾ ಹಾಗೂ ಹೊನ್ನಾವರ ಪಿಎಸ್ಐ ಗಳಾದ ಶ್ರೀ ಆನಂದಮೂರ್ತಿ ರವರು ಹಾಗೂ ಶಶಿಕುಮಾರ್ ರೂ ಕೂಡ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿ ತಾವೂ ಕೂಡ ಸ್ವತಃ ಅವರಿಗೆ ಊಟ ಬಿಡಿಸುವ ಕಾರ್ಯದಲ್ಲಿ ನೆರವಾದದ್ದು ನಮಗೆಲ್ಲ ತುಂಬಾ ಸಂತಸ ತಂದಿದೆ ಹಾಗೂ ಅವರೂ ಕೂಡ ಯಾವತ್ತೂ ಸಮಾಜ ಸೇವಾ ಕಾರ್ಯದಲ್ಲಿ ಯಾವತ್ತೂ ತೊಡಗಿಸಿಕೊಳ್ಳುವುದು ಅವರ ಮಾನವೀಯ ಗುಣ ಎಂದರು.

ಪೊಲೀಸ್ ಅಧಿಕಾರಿಗಳು ಸಾಮಾನ್ಯ ಜನರ ಜೊತೆ ಸಾಮಾನ್ಯರಂತೆ ಬಂದು ಸೇವಾಕಾರ್ಯದಲ್ಲಿ ಕೈಜೋಡಿಸಿದ್ದು ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಆ ಸುದ್ದಿಗಳ ಮೇಲೆ ಕ್ಲಿಕ್ ಮಾಡಿ