ಕುಮಟಾ: ತಾಲೂಕಿನ ಜೀವನದಿ ಅಘಾನಶಿನಿ ನದಿಯ ಉಪ್ಪುನೀರನ್ನು ತಡೆದು ಶುದ್ಧ ನೀರು ಆಣೆಕಟ್ಟು ನಿರ್ಮಾಣ ಮಾಡುವ ಕುರಿತು ಶಾಸಕ ದಿನಕರ ಶೆಟ್ಟಿಯವರು ಬುಧವಾರ ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ನ ಅಧಿಕಾರಿಗಳೊಂದಿಗೆ ಚರ್ಚಿಸಿ, ಡಿ.ಪಿ.ಆರ್ ತಯಾರಿಸಲು ಸೂಚನೆ ನೀಡಿದ್ದಾರೆ.
ಅಘಾನಶಿನಿ ನದಿಗೆ ಪ್ರವೇಶಿಸುವ ಉಪ್ಪು ನೀರನ್ನು ತಡೆದು, ಶುದ್ಧ ನೀರು ಶೇಖರಿಸುವ ಆಣೆಕಟ್ಟು ನಿರ್ಮಾಣ ಮಾಡುವುದರಿಂದ ತಾಲೂಕಿನ 9 ಗ್ರಾಮ ಪಂಚಾಯತಿಗಳಿಗೆ ಸಿಹಿನೀರು ಸರಬರಾಜು ಮಾಡಬಹುದಾಗಿದ್ದು, ಇದರಿಂದ ತಾಲೂಕಿನ ರೈತರ ಕೃಷಿ ಚಟುವಟಿಕೆಗಳಿಗೂ ಇನ್ನಷ್ಟು ಪ್ರೋತ್ಸಾಹ ದೊರೆಯಲಿದೆ. ಈ ಯೋಜನೆಯನ್ನು ಶೀಘ್ರದಲ್ಲೇ ಒದಗಿಸುವುದರ ಕುರಿತು ಅವರು ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ನ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಬಹುಪಯೋಗಿ ಶುದ್ಧ ನೀರು ಶೇಖರಿಸುವ ಆಣೆಕಟ್ಟು ನಿರ್ಮಾಣ ಯೋಜನೆಯನ್ನು ಮಂಜೂರಿ ಮಾಡಿಸುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಸುದ್ದಿಗಳ ಮೇಲೆ ಕ್ಲಿಕ್ ಮಾಡಿ
- ಸಂಸದ ಕಾಗೇರಿಯವರ ಮನೆ ಸಮೀಪ ಚಿರತೆ ಪ್ರತ್ಯಕ್ಷ.ಶಿರಸಿ : ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮನೆಯ ಅಂಗಳದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿರುವ ಘಟನೆ… Read more: ಸಂಸದ ಕಾಗೇರಿಯವರ ಮನೆ ಸಮೀಪ ಚಿರತೆ ಪ್ರತ್ಯಕ್ಷ.
- “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ.ಕುಮಟಾ : ಜನರು ಬಹುವಾಗಿ ಮೆಚ್ಚಿಕೊಂಡ ಹಾಗೂ ಜನರ ಭರವಸೆಗೆ ತಕ್ಕಂತೆ ಗುಣಮಟ್ಟದ ವಸ್ತುಗಳನ್ನು ಒದಗಿಸಿರುವ, ಜಿಲ್ಲೆಯ ಅತಿದೊಡ್ಡ… Read more: “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ.
- ಸರಸ್ವತಿ ಪಿ.ಯು ಕಾಲೇಜಿನಲ್ಲಿ ‘ಸಂಸ್ಕಾರಧಾರೆ’ ಅರ್ಥಪೂರ್ಣ ಕಾರ್ಯಕ್ರಮಕುಮಟಾ : ಎಲ್ಲಿಯೋ ಹರಕೆ ಹೊತ್ತು, ಜೀವನಕ್ಕೆ ನೆರವಾಗುತ್ತಾರೆಂದು ಮಕ್ಕಳನ್ನು ಪಡೆದು ಅವರ ಸಂತೋಷದಲ್ಲಿಯೇ ತಮ್ಮ ಸಂತೋಷವನ್ನು ಕಾಣುವ… Read more: ಸರಸ್ವತಿ ಪಿ.ಯು ಕಾಲೇಜಿನಲ್ಲಿ ‘ಸಂಸ್ಕಾರಧಾರೆ’ ಅರ್ಥಪೂರ್ಣ ಕಾರ್ಯಕ್ರಮ
- ಸಮುದ್ರದಲ್ಲಿ ಮುಳುಗುತ್ತಿರುವ ನಾಲ್ವರ ರಕ್ಷಣೆಗೋಕರ್ಣ: ಇಲ್ಲಿಯ ಮುಖ್ಯ ಕಡಲ ತೀರದ ಮಿಡ್ಸ್ ಬೀಚಿನ ಬಳಿ ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ ಕೇರಳ ಮೂಲದ ನಾಲ್ವರು… Read more: ಸಮುದ್ರದಲ್ಲಿ ಮುಳುಗುತ್ತಿರುವ ನಾಲ್ವರ ರಕ್ಷಣೆ
- ಮೊಬೈಲ್ ರಿಪೇರಿ, ಸೇವೆ ಕುರಿತ ಉಚಿತ ತರಬೇತಿಕಾರವಾರ: ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ರುಡ್ಸೆಟ್ ಸಂಸ್ಥೆಯ ವತಿಯಿಂದ ಮೊಬೈಲ್… Read more: ಮೊಬೈಲ್ ರಿಪೇರಿ, ಸೇವೆ ಕುರಿತ ಉಚಿತ ತರಬೇತಿ