ಕಾರವಾರ: ಇದೇ ಶನಿವಾರ ಬೆಳಿಗ್ಗೆ 9.00  ರಿಂದ ಸಂಜೆ 4.00 ರವರೆಗೆ ಕೋವಿಡ್ 19 ಲಸಿಕೆ ಹಾಕುವ ಕಾರ್ಯಕ್ರಮವನ್ನು ಉ.ಕ.ಜಿಲ್ಲೆಯ ಆರೋಗ್ಯ ಇಲಾಖೆಯ ಸಹಯೋಗದ ಅಡಿಯಲ್ಲಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ಮತ್ತು ಹೊರ ರಾಜ್ಯದ ಗೋವಾ ,ಮಹಾರಾಷ್ಟ್ರಕ್ಕೆ ಬೋಟ್ ಗಳಲ್ಲಿ ದುಡಿಯಲು ತೆರಳುವ 18 ವರ್ಷ ಮೇಲ್ಪಟ್ಟ ಎಲ್ಲ ಮೀನುಗಾರರಿಗೆ ಲಸಿಕಾಕರಣ ಆಯೋಜಿಸಲಾಗಿದೆ.

ಬೈತಕೋಲ ಕಾರವಾರ, ಅಮದಳ್ಳಿ, ತದಡಿ,ಹೊನ್ನಾವರ ಹಾಗೂ ಮಾವಿನಕುರ್ವೆ ಭಟ್ಕಳ ಮತ್ತು ಮೀನುಗಾರಿಕೆಯ ಇಳಿದಾಣ ಕೇಂದ್ರ ಗಳು- ಅಳ್ವೆಕೋಡಿ, ಬೆಳಂಬಾರ,ಗಂಗಾವಳಿ, ಬೇಲೆಕೇರಿ, ವನ್ನಳ್ಳಿ, ಮಂಜುಗುಣಿ, ತೆಂಗಿನ ಗುಂಡಿ,ಕಾಗಲ್ ಹಿಣಿ, ಹಾರವಾಡ, ಕಿಮಾನಿ ಹೊರಭಾಗ, ಅಳ್ವೆದಂಡೆ, ಶಶಿಹಿತ್ತಲು, ಮತ್ತು ಬೆಳಕೆ ಪ್ರದೇಶಗಳಲ್ಲಿ, ಲಸಿಕಾಕರಣ ಹಮ್ಮಿಕೊಳ್ಳಲಾಗಿದೆ.

ಎಲ್ಲ ಮೀನುಗಾರರು ತಪ್ಪದೆ ತಮ್ಮ ಮೀನುಗಾರಿಕೆ ಗುರುತಿನ ಪತ್ರ, ಆಧಾರ್ ಕಾರ್ಡ್ ಗಳೂಂದಿಗೆ ಮೇಲ್ಕಂಡ ಕೇಂದ್ರ ಗಳಲ್ಲಿ ಹಾಜರಾಗಿ ಲಸಿಕೆ ಹಾಕಿಸಿ ಕೂಳ್ಳಲು ಸೂಚಿಸಲಾಗಿದೆ. ಮೀನುಗಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಮೀನುಗಾರರ ಮುಖಂಡರು ಮೀನುಗಾರ ಕಾರ್ಮಿಕ ರನ್ನು ಲಸಿಕೆ ಹಾಕುವ ಕೇಂದ್ರಗಳಿಗೆ ಕರೆ ತರುವ ಮೂಲಕ ಈ ಲಸಿಕಾ ಅಭಿಯಾನವನ್ನು ಯಶಸ್ವಿಗೂಳಿಸಬೇಕೆಂದು ಮೀನುಗಾರಿಕೆ ಇಲಾಖೆ,ಕಾರವಾರ ವಲಯ‌ ಇದರ ಜಂಟಿ‌ ನಿರ್ದೇಶಕರಾದ ಪಿ.ನಾಗರಾಜು ಅವರು ಮಾಹಿತಿ‌ ನೀಡಿದ್ದಾರೆ.

RELATED ARTICLES  ಕಾರವಾರದಲ್ಲಿ ಟಿಪ್ಪು ಜಯಂತಿ ಆಚರಣೆ: ನಡೆಯಿತು ವಿಶೇಷ ಉಪನ್ಯಾಸ

ಈ ಪ್ರಮುಖ ಸುದ್ದಿಗಳನ್ನು ಓದಲು ಸುದ್ದಿಗಳ ಮೇಲೆ ಕ್ಲಿಕ್ ಮಾಡಿ.