ಯಲ್ಲಾಪುರ : ಎಂಟು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಗುಳ್ಳಾಪುರ ಸೇತುವೆ ಕೊಚ್ಚಿ ಹೋಗಿ ಸಂಪರ್ಕ ಕಡಿತವಾಗಿದೆ. ಇದೀಗ ಮಳೆಯ ಅವಾಂತರ ಪ್ರಾಣಕ್ಕೆ ಕುತ್ತು ತಂದಿರುವುದು ಬೇಸರದ ಸಂಗತಿ.
ಅನಾರೋಗ್ಯಕ್ಕೀಡಾದ ಕಲ್ಲೇಶ್ವರದ ನಾಗವೇಣಿ ನಾರಾಯಣ ಕುಣಬಿ ಎನ್ನುವವಳನ್ನು ಆಸ್ಪತ್ರೆಗೆ ಸೇರಿಸಲು ವಿಳಂಬವಾದ ಕಾರಣ ಆಕೆ ಸಾವನ್ನಪ್ಪಿದ್ದು ಅಲ್ಲಿಯ ಜನರಿಗೆ ಆತಂಕ ಉಂಟುಮಾಡಿದೆ. ಕಲ್ಲೇಶ್ವರದಿಂದ ಸುಮಾರು ಕಿ.ಮೀ ದೂರದ ಕಾರವಾರದ ಆಸ್ಪತ್ರೆಗೆ
ಕಾಚನಪಟ್ಟಿ-ಹೊಸಾಕಂಬಿ ಸೇತುವೆ, ಸಂಪೂರ್ಣ ಹದೆಗೆಟ್ಟ ರಸ್ತೆ ಮೂಲಕ 3-4 ಗಂಟೆ ಕಾಲ ವಿಳಂಬವಾಗಿ ತಲುಪಿದ್ದರಿಂದ ಸಮಯಕ್ಕೆ ಚಿಕಿತ್ಸೆ ಲಭಿಸದೇ ಸಾವಿಗೆ ಕಾರಣವಾಗಿದೆ ಎಂದು
ಸ್ಥಳೀಯರು ಆಕ್ಷೇಪಿಸಿದ್ದಾರೆ.
ಮಾಜಿ ಸಚಿವ ಶಿವರಾಮ ಹೆಬ್ಬಾರ ಸೇತುವೆ ಕುಸಿದ 24 ಗಂಟೆಯೊಳಗಾಗಿ ರಾಮನಗುಳಿ ಮತ್ತು ಅರಬೈಲ್‌ನಲ್ಲಿ ಎರಡು ಯಾಂತ್ರೀಕೃತ ದೋಣಿಯನ್ನು ನೀಡಿದ್ದರು. ಆದರೆ ಅದು ಬೆಳಿಗ್ಗೆ 8 ರಿಂದ ಸಂಜೆ 5.30 ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ನಂತರ ಅಲ್ಲಿಯ ನಾಗರಿಕರಿಗೆ ಆಕಸ್ಮಿಕ ಅನಾರೋಗ್ಯವಾದರೆ
ಪರಿಹಾರವೇನೆಂದು ತಿಳಿಯದಾಗಿದೆ?
ನಾಗವೇಣಿ ಸಂಜೆಯಾಗುತ್ತಿದ್ದಂತೆ ಒಂದೇ ಸಮನೆ ವಾಂತಿ ಮಾಡುತ್ತಿದ್ದ ಕಾರಣಕ್ಕೆ, ಅವಳನ್ನು ತಕ್ಷಣ ಆಸ್ಪತ್ರೆಗೆ ಒಯ್ಯಲು ನೆರೆಯವರ ವಾಹನದ ಸಹಾಯ ಪಡೆದು, ಕಾರವಾರದ ಜಿಲ್ಲಾಸ್ಪತ್ರೆಗೆ ತೆರಳಿದಾಗ ಅವಳಿಗೆ ತೀವ್ರ ಲೋ-ಬಿಪಿಯಾಗಿಅಲ್ಲೇ ಸಾವನ್ನಪ್ಪಿದ್ದಾಳೆ. ಚಿಕಿತ್ಸೆ ನಡೆಸುವುದಕ್ಕೂ ಸಾಧ್ಯವಾಗಿಲ್ಲವೆಂದು ಕುಟುಂಬದವರು ತಿಳಿಸಿದ್ದಾರೆ. ಈ ಘಟನೆಯಿಂದ ಜನ ಕಂಗಾಲಾಗಿದ್ದಾರೆ ಎಂದು ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದೆ.