ಬೆಂಗಳೂರು : ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ಲಂಕೇಶ ಪತ್ರಿಕೆ ಈ ವಾರದ ಸಂಚಿಕೆಯ ಕೆಲಸದಲ್ಲಿ ನಿರತರಾಗಿದ್ದ ಅವರು ಸಂಜೆಯಷ್ಟು ಹೊತ್ತಿಗೆ ಸಹೋದ್ಯೋಗಿ ಸತೀಶ್ ಅವರಿಗೆ ಉಳಿದ ಕೆಲಸ ನಾಳೆ ಮುಗಿಸೋಣ ಎಂದು ಹೇಳಿ ರಾಜರಾಜೇಶ್ವರಿ ನಗರದ ಮನೆ ಕಡೆ ಹೊರಟಿದ್ದರು.
ಆದ್ರೆ ಗೌರಿ ಅವರಿಗೆ ಕಾದಿದ್ದ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದು ಮುಗಿಸಿದ್ದಾರೆ.
ಈ ನಡುವೆ ತಮ್ಮ ಫೇಸ್ ಬುಕ್ ಪುಟದಲ್ಲಿ ತಂದೆಯವರನ್ನು ಸಿಕ್ಕಾಪಟ್ಟೆ ನೆನಪು ಮಾಡಿಕೊಂಡಿದ್ದರು. ಸಹೋದರಿ ಕವಿತಾ ಶಿಕ್ಷಕರ ದಿನಾಚರಣೆ ಅಂಗವಾಗಿ ಲಂಕೇಶ್ ಅವರ ಫೋಟೋ ಒಂದನ್ನು ಆಪ್ ಲೋಡ್ ಮಾಡಿದ್ದರು. ಇದೇ ಪೋಸ್ಟ್ ನ್ನು ಶೇರ್ ಮಾಡಿದ್ದ ಗೌರಿಯವರು ತಂದೆಯನ್ನು ನೆನಪು ಮಾಡಿಕೊಂಡಿದ್ದರು.
ಲಂಕೇಶ್ ಅವರನ್ನು ಇಡೀ ಕರ್ನಾಟಕ ಪ್ರೀತಿಯಿಂದ ಮೇಷ್ಟು ಎಂದೇ ಕರೆಯುತ್ತದೆ. ಹಾಗೇ ಸಹೋದರಿಯೊಂದಿಗೆ ತಂದೆಯನ್ನು ಗುರುವಿನ ಸ್ಥಾನದಲ್ಲಿಟ್ಟು ನೆನಪು ಮಾಡಿಕೊಂಡಿದ್ದರು.
ಇದರೊಂದಿಗೆ ಬೇರೆ ಬೇರೆ ಫೇಸ್ ಬುಕ್ ಪೇಜ್ ಗಳ ಪೋಸ್ಟ್ ಗಳನ್ನು ತಮ್ಮ ಪುಟದಲ್ಲೂ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ವಿಶೇಷವಾಗಿ ಇಂದು ಕಾಣಿಸಿಕೊಂಡಿದ್ದು ತಮ್ಮ ತಂದೆಯ ಕುರಿತಾದ ಪೋಸ್ಟ್.