ಶಿರಸಿ: ಉತ್ತರಕನ್ನಡದ ಹಲವೆಡೆ ಗೋವುಗಳ ಕಳ್ಳಸಾಗಾಣಿಕೆಯ ಸುದ್ದಿ ಆಗಾಗ ಕೇಳಿ ಬರುತ್ತಿತ್ತು. ಜುಲೈ 9 ರ ಮುಂಜಾನೆಯಲ್ಲಿ ತಾಲೂಕಿನ ಮರಾಠಿಕೋಪ್ಪ ಭಾಗದಲ್ಲಿ ದನಗಳ ಅಪಹರಣ ವಾಗಿತ್ತು. ಐಷಾರಾಮಿ ಕಾರಿನಲ್ಲಿ ಬಂದು ದನವನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣದ ಕುರಿತಾದ ಮಾಹಿತಿ ಸಿಸಿಟಿವಿಯಲ್ಲಿ ಸರಿಯಾಗಿತ್ತು. ಇದೀಗ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ಇಬ್ಬರನ್ನು ಹೆಡೆಮುರಿ ಕಟ್ಟಿದ್ದಾರೆ.
ಕಾರಿನಲ್ಲಿ ಬಂದು ಬೀದಿಬದಿಯ ದನಗಳನ್ನು ಕದ್ದು ಪರಾರಿಯಾಗುತ್ತಿದ್ದ ಅಂತರಾಜ್ಯ ಗೋಕಳ್ಳರನ್ನು ಇಲ್ಲಿನ ಪೊಲೀಸರು ಇಬ್ಬರನ್ನು ಬಂಧಿಸಿದ ಬಗ್ಗೆ ವರದಿಯಾಗಿದೆ. ಬಂಧಿತರು ಶಿವಮೊಗ್ಗ ಹಾಗೂ ಮಂಗಳೂರಿನವರು ಎಂದು ತಿಳಿದುಬಂದಿದೆ.
ನಿರಂತರವಾಗಿ ಗೋ ಕಳ್ಳಸಾಗಣೆ ಆಗುತ್ತಿರುವ ಬಗ್ಗೆ ಶಿರಸಿ ಗೋರಕ್ಷಕ ಪಡೆಯ ತಂಡದ ಪ್ರಮುಖ ರವಿ ಗೌಳಿ ದೂರು ದಾಖಲಿಸಿದ್ದರು.
ಗೋ ಕಳ್ಳರು ಪಿಪಿಇ ಕಿಟ್ ನಂತಹದ್ದನ್ನು ಧರಿಸಿ, ಕಾರಿನಲ್ಲಿ ಬಂದು ಇಂದು ಮುಂಜಾನೆ ಗೋವುಗಳನ್ನು ಕದ್ದೊಯ್ದಿದ್ದರು. ಕಾರಿನಲ್ಲಿ ಬಂದು ದನಗಳನ್ನು ಅಮಾನುಷವಾಗಿ ತುಂಬುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮುಂಜಾನೆ ಸುಮಾರು 4 ಗಂಟೆಯ ಸುಮಾರಿಗೆ ಈ ಕೃತ್ಯ ನಡೆದಿತ್ತು.
ಶಿರಸಿ ಸಿ.ಪಿ.ಐ, ಹೊಸ ಮಾರುಕಟ್ಟೆ ಠಾಣೆಯ ಪಿ.ಎಸ್.ಐ ಭೀಮಾಶಂಕರ್ ಮತ್ತು ಆರಕ್ಷಕ ಸಿಬ್ಬಂದಿಗಳ ಕಾರ್ಯಕ್ಕೆ, ಹೆಚ್ಚಿನ ಸಹಕಾರ ನೀಡಿದ ಶ್ರೀನಿವಾಸ ಹೆಬ್ಬಾರ ಇವರಿಗೆ ಸ್ಥಳೀಯರ ಪ್ರಶಂಸೆ ವ್ಯಕ್ತವಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ