”ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದಭಜನೆ ಪರಮ ಸುಖವಯ್ಯ..” ಎಂದು ಪುರಂದರದಾಸರು ಹೇಳಿದ್ದಾರೆ. ಬಂಗಾರಪ್ಪನವರ ಗರಡಿಯಲ್ಲಿ ಬೆಳೆದ ನಾನು ಸುಮಾರು 10 ವರ್ಷಗಳಿಂದ ಮೀನಿಗೆ ಗಾಳ ಹಾಕಿದ್ದೆ. ಒಂದು ದಿನ ಬೆಳಗ್ಗೆ 10 ರಿಂದ ರಾತ್ರಿ 3 ಗಂಟೆವರೆಗೂ ಗಾಳ ಹಾಕಿದ್ದೇವೆ. ಆದರೂ ಮೀನು ಗಾಳಕ್ಕೆ ಕಚ್ಚಿರಲಿಲ್ಲ. ಆಗಲೇ ಕಚ್ಚಿದ್ದರೆ ಇಷ್ಟು ಹೊತ್ತಿಗೆ ಮಾಜಿ ಮಂತ್ರಿಯಾಗಿರುತ್ತಿದ್ದರು. ನನ್ನ ಅಧ್ಯಕ್ಷತೆಯಲ್ಲಿ, ನನ್ನ ರಾಜಕೀಯ ಗುರುಗಳ ಮಗನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದು ನನ್ನ ಭಾಗ್ಯ ಎಂದಿದ್ದಾರೆ.

ನಾನು ಮೊನ್ನೆ ಯೂತ್ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿದ್ದಾಗ ಹೇಳಿದ್ದೆ. ನಿನ್ನೆ ಆಗಿದ್ದೆಲ್ಲ ಇತಿಹಾಸ, ನಾಳೆ ಬರುವುದು ಭವಿಷ್ಯ, ಆದರೆ ಈ ದಿನ ನಿಮ್ಮದು. ಅದನ್ನು ನೀವು ಬಳಸಿಕೊಳ್ಳುವುದು ಮುಖ್ಯ. ರಾಜಕಾರಣದಲ್ಲಿ ನಾವು ಕಾಂಗ್ರೆಸ್ ಪಕ್ಷಕ್ಕೆ ನಿತ್ಯ ಏನು ಸೇವೆ ಸಲ್ಲಿಸುತ್ತಿದ್ದೇವೆ. ಎಷ್ಟು ಜನರನ್ನು ಸೇರಿಸುತ್ತಿದ್ದೇವೆ. ಎಷ್ಟು ಬಲ ತುಂಬುತ್ತಿದ್ದೇವೆ ಎಂಬುದು ಮುಖ್ಯವಾದ ವಿಚಾರ ಎಂದಿದ್ದಾರೆ.

RELATED ARTICLES  ನೀರು ತುಂಬಿದ್ದ ಬಕೆಟ್ ಗೆ ಬಿದ್ದು 11 ತಿಂಗಳ ಕಂದಮ್ಮ ಸಾವು.

ಇಂದು ಪಕ್ಷಕ್ಕೆ ನೂರಾರು ಜನ ಸೇರುತ್ತಿದ್ದಾರೆ. ನಾವು ಮಧು ಅವರನ್ನು ಪಕ್ಷದ ಕಚೇರಿಯಲ್ಲೇ ಸೇರಿಸಿಕೊಳ್ಳಬಹುದಿತ್ತು. ನಾವು ಅವರನ್ನು ವ್ಯಕ್ತಿಯಾಗಿ ಸೇರಿಸಿಕೊಳ್ಳುತ್ತಿಲ್ಲ. ಅವರನ್ನು ಪಕ್ಷಕ್ಕೆ ಶಕ್ತಿಯಾಗಿ ಸೇರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ನನ್ನ ರಾಜಕಾರಣದ ಆರಂಭಿಕ ದಿನಗಳಲ್ಲಿ ಬಂಗಾರಪ್ಪ ಅವರು ಮುಖ್ಯಮಂತ್ರಿ ಆದರು. ನಂತರ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಆಗ ನಾನು ಹಾಗೂ ಬೆಳ್ಳಿಯಪ್ಪ ಅವರು ಬಂಗಾರಪ್ಪ ಅವರನ್ನು ಭೇಟಿ ಮಾಡಿ, ನಾವಿಬ್ಬರು ಏನು ಮಾಡಬೇಕು ಎಂದು ಕೇಳಿದ್ದೆವು. ಆಗ ಅವರು ನೀನು ನನ್ನ ಜತೆ ಬರಬೇಡ, ಎಸ್.ಎಂ. ಕೃಷ್ಣ ಅವರ ಜತೆ ಕಾಂಗ್ರೆಸ್ ಪಕ್ಷದಲ್ಲಿರು ಎಂದರು. ಅವರು ನನ್ನ ಜತೆ ಬಾ ಎಂದಿದ್ದರೆ ನಾನು ಯಾವ ನಿರ್ಧಾರ ತೆಗೆದುಕೊಳ್ಳುತ್ತಿದ್ದೆ ಎಂದು ಗೊತ್ತಿಲ್ಲ. ಇಂತಹ ಅನೇಕ ಘಟನೆಗಳು ನನ್ನ ಕಣ್ಣ ಮುಂದೆ ಬರುತ್ತಿವೆ. ಅವರ ಸುಪುತ್ರ ಪಕ್ಷ ಬಿಟ್ಟಾಗ, ಬೇರೆ ಪಕ್ಷ ಸೇರಿಕೊಂಡಾಗ ಮನಸ್ಸಿಗೆ ಬಹಳ ನೋವಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

RELATED ARTICLES  ವಿಶ್ವ ಹವ್ಯಕ ಸಮ್ಮೇಳನ - ಅಮೃತಮಹೋತ್ಸವ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ: ಕಾರ್ಯಕ್ರಮದಲ್ಲಿ ಏನೆಲ್ಲಾ ಇರಲಿದೆ ಗೊತ್ತಾ?

ನದಿ ನೀರು ಸಮುದ್ರ ಸೇರುವ ಹಾಗೇ, ಮಧು ಬಂಗಾರಪ್ಪ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ ಎಂದಿದ್ದಾರೆ.

ಮಧು ಬಂಗಾರಪ್ಪ ಅವರ ಜತೆ ಇಂದು ನೂರಾರು ಜನ ಕಾರ್ಯಕರ್ತರು ಪಕ್ಷ ಸೇರುತ್ತಿದ್ದೀರಿ. ಹೊಸಬರು ಹಳಬರು ಎಂಬ ವ್ಯತ್ಯಾಸ ಇಲ್ಲ. ಇಲ್ಲಿ ಪಕ್ಷದ ಬಾವುಟ ಹಿಡಿದ ಮೇಲೆ ಎಲ್ಲರೂ ಒಂದೇ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲಾಗುತ್ತದೆ. ಎಲ್ಲರೂ ಪಕ್ಷಕ್ಕೆ ಶಕ್ತಿಯಾಗಬೇಕು. ಇಡೀ ರಾಜ್ಯದುದ್ದಗಲಕ್ಕೆ ಪಕ್ಷದ ಸಿದ್ಧಾಂತ, ತತ್ವ, ನಾಯಕತ್ವವನ್ನು ಒಪ್ಪಿ ಬರುವವರಿಗೆ ಸ್ವಾಗತ. ಇಂದು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲ ಅವರ ಸಮ್ಮುಖದಲ್ಲಿ ನಿಮ್ಮೆಲ್ಲರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ನನ್ನದು 120, 130 ಗುರಿ ಅಲ್ಲ. ನನ್ನ ಗುರಿ 224 ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವುದಾಗಿದೆ ಎಂದಿದ್ದಾರೆ.’