ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ 3600 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದೆ‌. ಹೊನ್ನಾವರದಲ್ಲಿ 600, ಕುಮಟಾದಲ್ಲಿ 700, ಕಾರವಾರದಲ್ಲಿ 700, ದಾಂಡೇಲಿಯಲ್ಲಿ 600, ಶಿರಸಿಯಲ್ಲಿ 700 ವಾಕ್ಸಿನ್‌ ಲಭ್ಯವಿದೆ. 2ನೇ ಡೋಸ್ ಬಾಕಿಯಿರುವ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಲಾಗಿದೆ.

ಹೊನ್ನಾವರದಲ್ಲಿ

ನಾಳೆ ಕೋವ್ಯಾಕ್ಸಿನ್ ಎರಡನೆಯ ಡೋಸ್
ತಾಲೂಕಾ ಆಸ್ಪತ್ರೆಯಲ್ಲಿ 200, ಮಂಕಿ ಆರೋಗ್ಯ ಕೇಂದ್ರದಲ್ಲಿ 300, ಹಳದೀಪುರ ಆರೋಗ್ಯ ಕೆಂದ್ರದಲ್ಲಿ 100 ಲಭ್ಯವಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೋಟನಲ್ಲಿ ಕೆಲಸ ಮಾಡುವವರಿಗೆ 1000 ಕೋವಿಶೀಲ್ಡ್ ಲಸಿಕೆಯಿದೆ. ಮೀನುಗಾರಿಕೆ ಸಹಾಯಕ ನಿರ್ದೇಶಕರು ಸೂಚಿಸಿದ ಮೀನುಗಾರರಿಗೆ ಮಾತ್ರ ನಾಳೆ ಮಲ್ಲುಕುರ್ವಾ ಶಾಲೆಯಲ್ಲಿ 1000 ಕೋವಿಶೀಲ್ಡ್ ಲಸಿಕೆ ನೀಡಲಾಗುವುದು.

RELATED ARTICLES  ನಾಳೆ ಉತ್ತರಕನ್ನಡದಲ್ಲಿ 42,200 ಕ್ಕೂ ಹೆಚ್ಚು ಕೋವಿಡ್ ಲಸಿಕೆ ಲಭ್ಯ

ಕುಮಟಾದಲ್ಲಿ ಎಲ್ಲಿ?

ಮೀನುಗಾರಿಕೆಗೆ ಹೊರ ರಾಜ್ಯಗಳಾದ ಗೋವಾ, ಮಹಾರಾಷ್ಟ್ರಕ್ಕೆ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳುವ  18 ವರ್ಷ ಮೆಲ್ಪಟ್ಟವರಿಗೆ ಮಾತ್ರ covishield ಲಸಿಕೆಯನ್ನು ಕುಮಟಾ ತಾಲೂಕಿನ ಈ ಕೆಳಗಿನ‌ ಸ್ಥಳಗಳಲ್ಲಿ ಹಾಕಲಾಗುತ್ತಿದೆ.

1, HPS ಕಾಗಾಲ,
2. ದಾರೇಶ್ವರ ಸಭಾಭವನ
3.ತದಡಿ fishermen cooperative society building
4. ಗಂಗಾವಳಿ fishermen cooperative society building
5. ಮಿರ್ಜಾನ ಗ್ರಾ.ಪಂ
6. HPS ಶಶಿಹಿತ್ತಲು
7.ಶಾಂತಿಕಾಂಬಾ ಶಾಲೆ ಹೆಗಡೆ.

ಅಂಕೋಲಾದಲ್ಲಿಯ ವಿವರ

ಅಂಕೋಲಾ ತಾಲೂಕಿನ ಪಟ್ಟಣಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ (192), ಶಿರೂರ (14) ಸೇರಿ ಒಟ್ಟೂ 206 ಡೋಸ್ ಲಸಿಕೆಗಳನ್ನು ನೀಡಿದ್ದು,980 ಲಸಿಕೆಗಳು ಉಳಿಕೆಯಾಗಿದೆ ಎಂದು ವರದಿಯಾಗಿದೆ. ಇದರ ಹೊರತಾಗಿ ಜುಲೈ 31 ರ ಶನಿವಾರ ಮೀನುಗಾರರಿಗೆ ಸೇರಿದ ವಿಶೇಷ ಕೋಟಾದಡಿ ಮೀನುಗಾರಿಕಾ ಪ್ರದೇಶಗಳಲ್ಲಿ ವ್ಯಾಕ್ಸಿನ್ ಕ್ಯಾಂಪ್ ನಡೆಸಲಾಗುತ್ತಿದೆ.

RELATED ARTICLES  7 ದಿನ, 3 ವರ್ಷ ಹಾಗೂ 55ಗಂಟೆ! ಉಳಿದಿಲ್ಲ ಸರಕಾರ

ಮೀನುಗಾರಿಕೆಗೆ ಹೊರ ರಾಜ್ಯಕ್ಕೆ ತೆರಳುವವರು ಸೇರಿದಂತೆ ಅರ್ಹ ಮೀನುಗಾರರು ಮಾತ್ರ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕ ಆರೋಗ್ಯ ಅಧಿಕಾರಿಗಳು ಹಾಗೂ ಸಹಾಯಕ ಮೀನುಗಾರಿಕಾ ನಿರ್ದೇಶಕರ ಕಾರ್ಯಾಲಯದ ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿರಸಿಯಲ್ಲಿ ನಾಳಿನ ಲಸಿಕಾಕರಣ

ಶಿರಸಿ ತಾಲೂಕಿನಲ್ಲಿ ನಾಳೆ 700 ಕೋವ್ಯಾಕ್ಸಿನ್ ವಾಕ್ಸಿನ್‌ ಲಭ್ಯವಿದೆ. ಯಲ್ಲಾಪುರ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನೀಡಲಾಗುತ್ತಿದೆ ಎಂಬ ಮಾಹಿತಿ ಬಂದಿದೆ.