ಕುಮಟಾ : ತಾಲೂಕಿನ ಬಿ.ಜೆ.ಪಿ ಕಛೇರಿಯಲ್ಲಿ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಚುನಾವಣೆ ಕುರಿತು ಚರ್ಚಿಸಲು ಕುಮಟಾ ಮಂಡಲದ ಕಾರ್ಯಕಾರಿಣಿ ಸಭೆ ನಡೆಯಿತು.
ಈ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ವೆಂಕಟೇಶ ನಾಯಕ ಅವರು ಮಾತನಾಡಿ ಪಕ್ಷದ ಕಾರ್ಯಕರ್ತರಿಗೆ ಹಾಗೂ ಪದಾಧಿಕಾರಿಗಳಿಗೆ ಪಕ್ಷದ ಮುಂದಿನ ಸಂಘಟನಾತ್ಮಕ ಕಾರ್ಯ ಹಾಗೂ ಸಹಕಾರ ಇದ್ದಾಗ ಪ್ರಜೆಗಳ ಆಕಾಂಕ್ಷೆಗಳಿಗೆ ಪೂರಕವಾಗಿ ಕಾರ್ಯ ಮಾಡಲು ಅನುಕೂಲಕರವಾಗಿ ಪರಿಣಮಿಸುತ್ತದೆ. ಒಂದು ಸೈಕಲ್ ಚಲಾಯಿಸುವಾಗ ಹಿಂದಿನ ಚಕ್ರ ತಿರುಗಿದರೆ ಹೇಗೆ ಮುಂದಿನ ಚಕ್ರ ತಿರುಗಿ ಸೈಕಲ್ ಸವಾರಿ ನಡೆಯುತ್ತದೆಯೋ ಹಾಗೆ ಪಕ್ಷಕ್ಕೆ ಪದಾಧಿಕಾರಿಗಳು, ಕಾರ್ಯಕರ್ತರು ಸೈಕಲ್ ಹಿಂದಿನ ಚಕ್ರದಂತೆ ಚಲಿಸಿದಾಗ ಪಕ್ಷದ ಮುಂದಿನ ಚಕ್ರ ಚಲಿಸುವ ಮೂಲಕ ಹಿಂದಿನ ಚಕ್ರದ ಉದ್ದೇಶ ಪುರೈಸಲು ಅನುಕೂಲ ಆಗಲಿದೆ ಎಂಬ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ದಿನಕರ ಶೆಟ್ಟಿ ಮಾತನಾಡಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಚುನಾವಣೆ ಕುರಿತು ನಾವೆಲ್ಲರೂ ಒಟ್ಟಾಗಿ ಕಾರ್ಯಮಾಡುವ ಅಗತ್ಯತೆ ಇದೆ. ಪಕ್ಷವನ್ನು ಬಲಿಷ್ಠವಾಗಿಸಲು ನಾವೆಲ್ಲರೂ ಕಾರ್ಯ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ವಿಭಾಗ ಸಹ ಪ್ರಭಾರಿ ಶ್ರೀ ವಿನೋದ ಪ್ರಭು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್.ಎಸ್.ಹೆಗಡೆ, ಶ್ರೀ ಗೋವಿಂದ ನಾಯ್ಕ, ಶ್ರೀ ಚಂದ್ರು ಎಸಳೆ, ಮಂಡಲ ಅಧ್ಯಕ್ಷರಾದ ಶ್ರೀ ಹೇಮಂತಕುಮಾರ್ ಗಾಂವ್ಕರ್, ಪುರಸಭಾ ಅಧ್ಯಕ್ಷರಾದ ಶ್ರೀಮತಿ ಮೋಹಿನಿ ಗೌಡ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಿ.ಐ.ಹೆಗಡೆ ಹಾಗೂ ಪಕ್ಷದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.