ಹೊನ್ನಾವರ: ಅಭಿನೇತ್ರಿ ಆಟ್ರ್ಸ್ ಟ್ರಸ್ಟ ನಿಲ್ಕೋಡ್ ಇವರು ಆಯೋಜಿಸಿದ ರಂಗ ಸಂಗ ಇದರ ರಂಗಮಹೊತ್ಸವ ಸಮಾರೋಪ ಸಮಾರಂಭ ಎಸ್.ಡಿ.ಎಂ.ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಬಡಗುತಿಟ್ಟಿನ ಹಾಸ್ಯ ಕಲಾವಿದ ರಮೇಶ ಭಂಡಾರಿ ಇವರಿಗೆ ಕಣ್ಣಿ ಪ್ರಶಸ್ತ್ರಿ ಹಾಗೂ ಅಭಿನೇತ್ರಿ ಪ್ರಶಸ್ತಿಯನ್ನು ಸ್ತ್ರೀ ವೇಷದಾರಿ ಭಾಸ್ಕರ ಜೋಶಿ ಇವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ರಾಮ ಹೆಗಡೆ ಇವರಿಗೆ ಸಂಘಟಕರು ಆರ್ಥಿಕವಾಗಿ ನೆರವು ನೀಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದರಾದ ಕೃಷ್ಣ ಯಾಜಿ ಬಳ್ಕೂರ್ ಮಾತನಾಡಿ ಸಂಘಟನಾ ಚಾತುರ್ಯ ಕಲಾವಿದ ಕಣ್ಣಿ ಎಂದರೆ ತಪ್ಪಾಗಲಾರದು. ಪ್ರತಿ ವರ್ಷವು ಅವರ ನೆನಪಿನಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸುವ ಮೂಲಕ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ ಈ ಕಾರ್ಯಕ್ರಮ ಹಿಗೇಯೆ ಮುಂದುವರೆಸುವ ಮೂಲಕ ಅನೇಕ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.
ನಿವೃತ್ತ ಪ್ರಾಧ್ಯಪಕ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ ಒಂದು ಸಂಸ್ಥೆ ಕಟ್ಟಿ ಯಕ್ಷಗಾನ ಕಲಾವಿದನಾಗಿ ತನ್ನ ಸಹೊದ್ಯೋಗಿ ಕಲಾವಿದರಿಗೆ ಸಹಕರಿಸುವುದು ಉತ್ತಮ ಕಾರ್ಯ. ತಾಳಮದ್ದಲೆ ಯಕ್ಷಗಾನ ಆಯೋಜಿಸಿ ಕಲಾವಿದರಿಗೆ ಅವಕಾಶದ ಜೊತೆ ಕಲೆಗೆ ಪೆÇತ್ಸಾಹ ನೀಡುತ್ತಿದ್ದಾರೆ. ಕಣ್ಣಿಯವರ ನೆನಪಿನಲ್ಲಿ ನಡೆಯುವ ಈ ಕಾರ್ಯಕ್ರಮ ನೈಜ ಕಲಾವಿದನಿಗೆ ದೊರೆಯುವ ಗೌರವ ಎಂದರು.
ಕಳೆದ ಏಳು ದಿನಗಳಿಂದ ಪ್ರತಿದಿನ ತರಾಳಮದ್ದಳೆ ಹಾಗೂ ಯಕ್ಷಗಾನ ಕಾರ್ಯಕ್ರಮ ನೇರವೇರಿತು.
ಸಂಘಟನೆಯ ಅಧ್ಯಕ್ಷರಾದ ಶಂಕರ ಹೆಗಡೆ ನಿಲ್ಕೋಡ್ ಸ್ವಾಗತಿಸಿ ಸಂಘಟನೆಯ ಕಾರ್ಯವೈಖರಿಯನ್ನು ವಿವರಿಸಿದರು.
ವೇದಿಕೆಯಲ್ಲಿ ಯಕ್ಷಗಾನ ಕಲಾವಿದ ರಮೇಶ ಭಂಡಾರಿ, ಭಾಸ್ಕರ ಜೋಶಿ, ಯಕ್ಷಗಾನ ಪೆÇೀಷಕರು ಹಾಗೂ ಬಿಜೆಪಿ ಮಂಡಲ ಮಂಡಲಾಧ್ಯಕ್ಷ ರಾಜೇಶ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು.