ಕುಮಟಾ : 16 ವಿದ್ಯಾರ್ಥಿಗಳು 600 ಕ್ಕೆ 600 ಅಂಕಗಳಿಸಿ ಉತ್ತರಕನ್ನಡದಲ್ಲಿಯೇ ಹೊಸ ಸಂಚಲನ ಮೂಡಿಸಿರುವ ಅತ್ಯುತ್ತಮ ವಿದ್ಯಾರ್ಥಿಗಳ ಬಳಗವನ್ನು ಹೊಂದಿರುವ ಹಾಗೂ ವಿದ್ಯಾರ್ಥಿಗಳಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿರುವ ವಿಧಾತ್ರಿ ಅಕಾಡೆಮಿ ಕುಮಟಾದ ಕೊಂಕಣ ಎಜ್ಯುಕೇಶನ್ ಜೊತೆಗೆ ಸೇರಿ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿದೆ. ಬಿ.ಕೆ ಭಂಡಾರ್ಕರ್ಸ್ ಸರಸ್ವತಿ ಪಿ.ಯು ಕಾಲೇಜ್ ನಲ್ಲಿ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದ್ದು ಈ ವರ್ಷ 121 ವಿದ್ಯಾರ್ಥಿಗಳಲ್ಲಿ 16 ಮಂದಿ 600/600 ಅಂಕ ಪಡೆದರೆ, 38 ವಿದ್ಯಾರ್ಥಿಗಳು ಶೇ 95 ಕ್ಕೂ ಹೆಚ್ಚು ಅಂಕ ಪಡೆದಿದ್ದು, 29 ವಿದ್ಯಾರ್ಥಿಗಳು ಶೇ 90 ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಶೇ85 ಕ್ಕಿಂತ ಹೆಚ್ಚು ಅಂಕವನ್ನು 15 ವಿದ್ಯಾರ್ಥಿಗಳು ಪಡೆದಿದ್ದಾರೆ. 11 ವಿದ್ಯಾರ್ಥಿಗಳು 80 ಶೇ, 8 ವಿದ್ಯಾರ್ಥಿಗಳು 70 ಶೇ ಕ್ಕಿಂತ ಹೆಚ್ಚು ಅಂಕವನ್ನು ಹಾಗೂ 4 ಮಂದಿ ಶೇ 60 ಕ್ಕೂ ಮಿಗಿಲು ಅಂಕ ಪಡೆದಿದ್ದಾರೆ.

IMG 20210731 WA0006
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ.

ಸ್ಪರ್ಧಾತ್ಮಕ ಪರೀಕ್ಷೆಗಳಾದ KCET, JEE (Mains), NEET, NATA, NDA, AGRI ಮುಂತಾದವುಗಳಿಗೆ ವಿಶೇಷ ಆದ್ಯತೆ ನೀಡುತ್ತಿರುವ ಈ ಸಂಸ್ಥೆ ದಕ್ಷಿಣ ಕನ್ನಡಗಳಲ್ಲಿ ಸಿಗುತ್ತಿರುವ ಶಿಕ್ಷಣಕ್ಕೆ ಸರಿ ಮಿಗಿಲೆನ್ನುವಂತೆ ಉತ್ತರ ಕನ್ನಡದಲ್ಲಿಯೇ ಶಿಕ್ಷಣ ನೀಡುತ್ತಿದೆ. ಈಗಾಗಲೇ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಕ್ಕಳು ಭಾಗವಹಿಸಿ ಸಾಧನೆ ಮಾಡುತ್ತಿರುವ ಹೆಗ್ಗಳಿಕೆಯೂ ವಿಧಾತ್ರಿಯದ್ದು.

Boys & Girls ಗೆ ಪ್ರತ್ಯೇಕ ಹಾಸ್ಟೆಲ್.

ಕುಮಟಾ ಹಾಗೂ ಸುತ್ತಮುತ್ತಲ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಹೊರ ಜಿಲ್ಲೆ ಹಾಗೂ ಬೇರೆ ಬೇರೆ ಕಡೆಗಳಿಂದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಗಂಡು ಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.

RELATED ARTICLES  ಭಾರತೀಯ ವಾಯು ಪಡೆ(ಐಎಎಫ್) ಚೀನಾಗಿಂತಲೂ ಬಲಿಷ್ಠ.

IMG 20210731 WA0006

ಬಸ್ ಹಾಗೂ ಊಟದ ವ್ಯವಸ್ಥೆ 

27 ವರ್ಷಗಳಿಂದ  ಶಿಕ್ಷಣದಲ್ಲಿ  ವೈವಿದ್ಯತೆಯ ಮೂಲಕ ಹೆಸರುಗಳಿಸಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ವಿದ್ಯಾರ್ಥಿಗಳಿಗೆ ಗೋಕರ್ಣ, ಹೊನ್ನಾವರ, ಅಂಕೋಲಾ ದಂತಹ ಪಟ್ಟಣದ ಪ್ರದೇಶಗಳಿಗೆ ಹಾಗೂ ಬಾಡ, ಚಂದಾವರ, ನವಿಲಗೋಣನಂತಹ ಹಳ್ಳಿಗಳಿಗೆ ಸುಸಜ್ಜಿತ ಶಾಲಾ ಬಸ್ ವ್ಯವಸ್ಥೆ ಕಲ್ಪಿಸಿದೆ. ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಶುದ್ಧ, ಹಾಗೂ ಸ್ವಾದಿಷ್ಟ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿರುವ ಮೂಲಕ ಜನ ಮೆಚ್ಚುಗೆ ಗಳಿಸಿದೆ. ವಿಶಾಲ ಕ್ರೀಡಾಂಗಣ, ಸ್ಮಾರ್ಟ ಕ್ಲಾಸ್, ಕ್ರೀಡೋಪಕರಣಗಳು, ವಿಜ್ಞಾನ ಲ್ಯಾಬ್‍ಗಳನ್ನು ಒದಗಿಸಿರುವ ಕೊಂಕಣ ಎಜ್ಯುಕೇಶನ್ ವಿಧಾತ್ರಿ ಅಕಾಡೆಮಿ ಜೊತೆಗೆ ಸೇರಿ ಅತ್ಯುನ್ನತ ಕಾಲೇಜು ಶಿಕ್ಷಣ ನೀಡುತ್ತಿದೆ.

ಸುಸಜ್ಜಿತವಾದ ಲ್ಯಾಬೋರೇಟರಿ.

ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಸುಸಜ್ಜಿತವಾದ ಲ್ಯಾಬೋರೇಟರಿ ಗಳನ್ನು ಸಂಸ್ಥೆ ಒಳಗೊಂಡಿದ್ದು ಯಾವೆಲ್ಲಾ ಅವಶ್ಯಕತೆಗಳ ಅಗತ್ಯತೆ ಇದೆಯೋ ಅವುಗಳನ್ನು ನಿರಂತರವಾಗಿ ವಿದ್ಯಾರ್ಥಿಗಳಿಗೆ ಪೂರೈಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳನ್ನು ಕ್ರಿಯಾತ್ಮಕವಾಗಿ ರೂಪಿಸುವ ದೃಷ್ಟಿಯಿಂದ ಸ್ಟೇಟ್ ಆಫ್ ಆರ್ಟ್ ಲ್ಯಾಬೋರೇಟರಿ ಗಳು ಬಳಕೆಯಲ್ಲಿದೆ.

IMG 20210731 WA0006

ಅತ್ಯುತ್ತಮ ಪ್ರಾಧ್ಯಾಪಕ ವೃಂದ 

ಮಂಗಳೂರು-ಬೆಂಗಳೂರು ಹುಬ್ಬಳ್ಳಿ-ಧಾರವಾಡಗಳಲ್ಲಿ ಸರಿ ಸುಮಾರು 10ರಿಂದ 20 ವರ್ಷ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಪ್ರಾಧ್ಯಾಪಕರು ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಅನುಭವದ ಧಾರೆ ಎರೆಯುತ್ತಿದ್ದಾರೆ. ಪ್ರಾಯೋಗಿಕ ತರಗತಿಗಳು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾದ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ರೂಪಿಸಲು ತಮ್ಮ ಪರಿಪೂರ್ಣ ಶ್ರಮ ವಹಿಸುತ್ತಿರುವುದು ಶ್ಲಾಘನೀಯ ಎಂದು ಪಾಲಕರು ಈಗಾಗಲೇ ಮೆಚ್ಚುಗೆ ಸೂಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಇದಲ್ಲದೆ ಪ್ರತಿ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಉಪನ್ಯಾಸಕರು ಪ್ರತ್ಯೇಕ ಗಮನ ನೀಡುತ್ತಿದ್ದು ಇದರ ಜೊತೆಗೆ ಅತ್ಯುತ್ತಮವಾದ ಯೋಜನೆಗಳೊಂದಿಗೆ ರಿವಿಸನ್ ಟೆಸ್ಟ್ ಗಳು ನಡೆಯಲಿದೆ.

RELATED ARTICLES  ಪ್ರಯಾಣದಲ್ಲಿ ವಾಂತಿ ಸಮಸ್ಯೆ : ಇಲ್ಲಿದೆ ಸರಳ ಪರಿಹಾರಗಳು

ಶೈಕ್ಷಣಿಕ ಪರಿಕರಗಳ ಪೂರೈಕೆ.

ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಅಗತ್ಯವಾದ ಶೈಕ್ಷಣಿಕ ಪರಿಕರಗಳು ಪಠ್ಯಪುಸ್ತಕಗಳು ಹಾಗೂ ಬೇರೆ ಬೇರೆ ಕಡೆಗಳಲ್ಲಿ ಬಳಕೆಯಾಗುತ್ತಿರುವ ಜ್ಞಾನದ ಅಭಿವೃದ್ಧಿಯ ದೃಷ್ಟಿಯಿಂದ ಉಪಯುಕ್ತ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಇದರ ಜೊತೆಗೆ ಎಲ್ಲಾ ವಿಧದ ಪಠ್ಯಗಳು ಹಾಗೂ ಶಾಲಾ ಸಮವಸ್ತ್ರ ಪೂರೈಸಲಾಗುತ್ತಿದೆ.

IMG 20210731 WA0006

ನಿರಂತರ ಪಾಲಕರ ಸಭೆ

ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಪಾಲಕರ ಜೊತೆಗೆ ನಿರಂತರ ಸಂವಹನವನ್ನು ಕಾಲೇಜು ನಡೆಸಲಿದ್ದು, ನಿರಂತರವಾಗಿ ಪಾಲಕರ ಸಭೆ ಮಾಹಿತಿ ವಿನಿಮಯ ಕಾರ್ಯಕ್ರಮ ಹಾಗೂ ವಿವಿಧ ನುರಿತ ಉಪನ್ಯಾಸಕರಿಂದ ಉಪನ್ಯಾಸ ಕಾರ್ಯಕ್ರಮ ಇವುಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳ ಹೆಜ್ಜೆ ಹೆಜ್ಜೆಯನ್ನೂ ಗಮನಿಸಿ ಅವರ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದೆ.

ದಾಖಲಾತಿಗಾಗಿ ಸಂಪರ್ಕಿಸಿ
ಸರಸ್ವತಿ ಪಿ.ಯು ಕಾಲೇಜ್ (ಕೊಂಕಣ ಎಜ್ಯುಕೇಶನ್ ಟ್ರಸ್ಟ್), ವಿದ್ಯಾಗಿರಿ, ಕಲಭಾಗ, ಕುಮಟಾ. ಸಂಪರ್ಕ ಹಾಗೂ ಮಾಹಿತಿಗಾಗಿ  9972664155,  9972663855

IMG 20210731 WA0006