ಕಾರವಾರ: ಕೋವಿಡ್ ಮೂರನೇ ಅಲೆಯ ಬಗೆಗಿನ ಭಯ ಒಂದೆಡೆ ಪ್ರಾರಂಭವಾಗುತ್ತಿದ್ದರೆ, ಕೋವಿಡ್ ಲಸಿಕಾಕರಣ ಚುರುಕುಗೊಳ್ಳುತ್ತಿದೆ. ಬಹುದಿನಗಳಿಂದ ಕೋವಿಡ್ ಪ್ರಥಮ ಹಂತದ ಲಸಿಕೆಗಾಗಿ ಕಾದಿರುವ ಉತ್ತರಕನ್ನಡದ ಕೆಲವು ತಾಲೂಕಿನ ತಾಲೂಕಿನ ಜನತೆಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ.

ಅಗಸ್ಟ್ 2 ರಿಂದ ಜಿಲ್ಲೆಗೆ ಪೂರೈಕೆಯಾಗುವ ಕೋವಿಡ್ ಲಸಿಕೆಯಲ್ಲಿ 50-50 ಆದಾರದಲ್ಲಿ ಅಂದರೆ 50% 2ನೇ ಡೋಸ್ ಗೆ ಮೀಸಲಿಟ್ಟು ಲಸಿಕೆ ಲಭ್ಯತೆಯ ಆಧಾರದ ಮೆಲೆ 18 ವರ್ಷ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ 1 ನೇ ಡೋಸ್ ಲಸಿಕಾಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂಬ ಮಹತ್ವದ ಮಾಹಿತಿ ನೀಡಲಾಗಿದೆ.

ಲಭ್ಯವಿರುವ ಲಸಿಕೆಯ ಪ್ರಮಾಣವನ್ನು ಲಸಿಕಾಕರಣ ನಡೆಸುವ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು. ಆದುದರಿಂದ ಸಾರ್ವಜನಿಕರು ಕೋವಿಡ್ ಸಂಬಂಧಿಸಿದ ಮುಂಜ್ರಾಗತಾ ಕ್ರಮಗಳನ್ನು ಪಾಲಿಸಿ ಈ ಲಸಿಕಾಕರಣ ಕಾರ್ಯಕ್ರಮದಲ್ಲಿ ಲಸಿಕೆಯನ್ನು ಪಡೆಯಲು ಕೋರಲಾಗಿದೆ.

RELATED ARTICLES  ನಾವು ನಮ್ಮಿಷ್ಟ ಫೇಸಬುಕ್ ಗ್ರೂಪ್ ನ ಐದನೇ ವಾರ್ಷಿಕ ಸ್ನೇಹ ಸಮ್ಮೇಳನ : ಸಂಯೋಜನೆಗೊಂಡಿದೆ "ಸ್ನೇಹ ದೀಪ"

ಕುಮಟಾದಲ್ಲಿ ಎಲ್ಲೆಲ್ಲಿ?

ಕುಮಟಾದಲ್ಲಿ ನಾಳೆ ಒಟ್ಟು ,3,300 ಲಸಿಕೆ ಲಭ್ಯವಿದೆ. ಇದರಲ್ಲಿ ಕೋವಿಶೀಲ್ಡ್ 2,600 ಲಭ್ಯವಿದ್ದು, ಈ ಕೆಳಕಂಡ ಸ್ಥಳದಲ್ಲಿ ಮೊದಲನೇ ಮತ್ತು ಎರಡನೇ ಡೋಸ್ ನೀಡಲಾಗುವುದು. ಪುರಭವನದ ಕಿತ್ತೂರು ರಾಣಿ ಚೆನ್ನಮ್ಮ‌ಪಾರ್ಕ್ ನಲ್ಲಿ ಕೋವಾಕ್ಸಿನ್ 700 ಡೋಸ್ ( ಎರಡನೇ ಡೋಸ್ ಮಾತ್ರ ) ಲಭ್ಯವಿದೆ.

IMG 20210801 WA0001
ಅಂಕೋಲಾದಲ್ಲಿಯ ಲಸಿಕೆಯ ಲಭ್ಯತಾ ವಿವರ

ಆಗಸ್ಟ್ 2ರ ಸೋಮವಾರದಿಂದ 1st ಡೋಸ್ ಲಸಿಕೆ ನೀಡಿಕೆಗೂ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ.ಬೆಳಂಬರ (250), ಅಲಗೇರಿ (100),ಭಾವಿಕೇರಿ(80), ರಾಮನಗುಳಿ(200),ಹಿಲ್ಲೂರು(150), ಸಗಡಗೇರಿ(100), ಹಾಗೂ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನ(150) ಲಸಿಕೆಗಳನ್ನು ಫಸ್ಟ್ ಡೋಸ್ ಗಳಿಗಾಗಿ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ.

RELATED ARTICLES  ಮೊದಲ ಹಂತದ ಪಲ್ಸ ಪೋಲಿಯೋಗೆ ಚಾಲನೆ ನೀಡಿದ ಶಾಸಕರು.

ಸರಿಸುಮಾರು (50:50) ಎರಡನೇ ಡೋಸ್ ಗಳನ್ನು ಸಹ ಆಯಾ ವ್ಯಾಕ್ಸಿನ್ ಕೇಂದ್ರಗಳಲ್ಲಿ ನೀಡಲು ಸಿದ್ಧತೆ ನಡೆಸಿದ್ದು ಒಟ್ಟಾರೆಯಾಗಿ ನಾಳೆ ಆಗಸ್ಟ್ 2 ರಂದು ತಾಲೂಕಿನಲ್ಲಿ 2050 ಲಸಿಕೆ ಲಭ್ಯವಿದೆ.

ಲಸಿಕೆ ಲಭ್ಯತೆ ಆಧಾರದ ಮೇಲೆ, ಅಗಸ್ಟ್ 2ರ ಸೋಮವಾರದ ನಂತರವೂ ಫಸ್ಟ್ ಡೋಸ್ ಮತ್ತು 2ನೇ ಹಂತದ ಲಸಿಕೆ ವಿತರಣೆ ಕ್ಯಾಂಪ್ ಮುಂದುವರೆಯುವುದರಿಂದ,ಸಾರ್ವಜನಿಕರು ಒಮ್ಮೇಲೆ ಗುಂಪು ಸೇರುವುದು, ಒತ್ತಡಕ್ಕೊಳಗಾಗುವದನ್ನು ತಪ್ಪಿಸಿ, ಇಲಾಖೆ ಜೊತೆ ಸಹಕರಿಸುವಂತೆ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.