ಕಾರವಾರ : ಕೊರೊನಾ ತಡೆಗಾಗಿ ಸರ್ಕಾರ ಉಚಿತ ವ್ಯಾಕ್ಸಿನ್ ನೀಡುತ್ತಿದ್ದು, ಹಲವೆಡೆ ಅಭಿಯಾನ ನಡೆಸಿ ವ್ಯಾಕ್ಸಿನ್ ನೀಡುತ್ತಿದ್ದಾರೆ. ಆ.2, ಸೋಮವಾರ ಹೊನ್ನಾವರ ಹಾಗೂ ಶಿರಸಿಯಲ್ಲಿ ಲಭ್ಯವಿರುವ ವ್ಯಾಕ್ಸಿನೇಷನ್‌ ವಿವರ ಇಂತಿದೆ.

ಹೊನ್ನಾವರದಲ್ಲಿ ಎಲ್ಲೆಲ್ಲಿ?

ಹೊನ್ನಾವರದ ಹಲವೆಡೆ ನಾಳೆ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯಲಿದ್ದು, ಹೊನ್ನಾವರ ತಾಲೂಕಿನಲ್ಲಿಯೂ 50-50 ಪ್ರಮಾಣ ಅನ್ವಯವಾಗಲಿದ್ದು, ಮೊದಲ‌ ಡೋಸ್ ಪಡೆಯುವವರಿಗೆ 50% ಹಾಗೂ ಎರಡನೇ ಡೋಸ್ ಪಡೆಯುವವರಿಗೆ 50% ಲಸಿಕೆ ಲಭ್ಯವಾಗಲಿದೆ.

ಹೊನ್ನಾವರ ತಾಲ್ಲೂಕಿನಲ್ಲಿ ಸೋಮವಾರ ಒಟ್ಟು 2,500 ಕೋವಿಶೀಲ್ಡ್ ಲಭ್ಯವಿದೆ. ತಾಲೂಕಾ ಆಸ್ಪತ್ರೆಯಲ್ಲಿ-200, ಪಟ್ಟಣ ವ್ಯಾಪ್ತಿಯಲ್ಲಿ-400 ವಾಕ್ಸಿನ್ ಸಂಗ್ರಹವಿದೆ. ಅಲ್ಲದೆ ಗ್ರಾಮೀಣ ಪ್ರದೇಶವಾದ ಹಳದಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ- 200, ಕಡತೋಕಾ ಆರೋಗ್ಯ ಕೇಂದ್ರದಲ್ಲಿ-200, ಹೊಸಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ- 200, ಖರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ- 200, ಡೋಸ್ ನೀಡಲಾಗುತ್ತಿದೆ.

RELATED ARTICLES  ಇಂದಿನ‌ ದಿನ ನಿಮ್ಮ ಪಾಲಿಗೆ ಹೇಗಿದೆ ಗೊತ್ತಾ? ದಿನಾಂಕ 05/01/2019 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ.

ಶಂಸಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ- 200, ಗೇರುಸೋಪ್ಪಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ-200, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ-300, ಸಾಲಕೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 400 ಜನರಿಗೆ ಲಸಿಕೆ ವಿತರಿಸಲು ನಿರ್ಧರಿಸಲಾಗಿದೆ. ಈ ಎಲ್ಲಾ ಕಡೆಗಳಲ್ಲಿ ಶೇಕಡಾ 50 ರಷ್ಟು ಪ್ರಥಮ ಡೋಸ್, ಶೇಕಡಾ 50 ರಷ್ಟು ಎರಡನೇ ಡೋಸ್ ನೀಡಲಾಗುತ್ತಿದೆ.

ಶಿರಸಿಯಲ್ಲಿ ಎಲ್ಲೆಲ್ಲಿ?

ಆ.2, ಸೋಮವಾರ ಶಿರಸಿ ತಾಲೂಕಿನಲ್ಲಿ ಒಟ್ಟೂ 3,000 ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಒಂದನೇ ಮತ್ತು 2ನೇ ಡೋಸ್ ಬಾಕಿಯಿರುವವರಿಗೆ ನೀಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಕೋವಿಶೀಲ್ಡ್ ಮೊದಲ ಮತ್ತು ಎರಡನೇ ಡೋಸ್ ಲಭ್ಯ:

3,000 ಡೋಸ್ ಕೋವಿಶೀಲ್ಡ್ ಲಸಿಕೆಯಲ್ಲಿ ಮೊದಲ ಡೋಸ್ ಹಾಗು ಎರಡನೇ ಡೋಸ್ ಬಾಕಿಯಿರುವವರಿಗೆ ಅವಕಾಶವಿದ್ದು, ತಾಲೂಕಿನ ದಾಸನಕೊಪ್ಪದಲ್ಲಿ 300, ಬನವಾಸಿ 200, ಬಿಸಲಕೊಪ್ಪ 300, ಸುಗಾವಿ 200, ಹುಲೇಕಲ್ 300, ಸಾಲ್ಕಣಿ 300, ರೇವಣಕಟ್ಟಾ 150, ಕಕ್ಕಳ್ಳಿ 100, ಮೆಣಸಿ 50, ಹೆಗಡೆಕಟ್ಟಾ 300, ವಾರ್ಡ್ ನಂ.11, 12, 13, 24 ನೇ ಜನರಿಗೆ ನಗರದ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ 400 ಡೋಸ್ ಲಸಿಕೆ ಲಭ್ಯವಿದೆ. ಮತ್ತು 400 ಡೋಸ್ ಲಸಿಕೆಯನ್ನು ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನೀಡಲಾಗುವುದು.

RELATED ARTICLES  ಪಾವಗಡ ತಾಲೂಕಿನಲ್ಲಿ ನಿರ್ಮಾಣ ಮಾಡಲಾಗಿರುವ ವಿಶ್ವದ ಅತೀ ದೊಡ್ಡ 'ಸೋಲಾರ್ ಪಾರ್ಕ್'ಗೆ ನಾಳೆ ಚಾಲನೆ.

ಕೋವ್ಯಾಕ್ಸಿನ್ ಮೊದಲ ಡೋಸ್ ಲಭ್ಯ:

ತಾಲೂಕಿನಲ್ಲಿ 700 ಡೋಸ್ ಕೋವ್ಯಾಕ್ಸಿನ್ ಲಭ್ಯವಿದ್ದು, ಅದನ್ನು ಕಾನಗೋಡಿನಲ್ಲಿ 400, ಉಂಚಳ್ಳಿಯಲ್ಲಿ 200, ಬನವಾಸಿಯಲ್ಲಿ 100 ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.