ಹೊನ್ನಾವರ : ಹೊನ್ನಾವರ ತಾಲೂಕಿನ ಹುಡಗೋಡ ಸಮೀಪ ತಾಯಿಯ ಜೊತೆ ಹೊಳೆ ಬದಿಯಲ್ಲಿ ಬಟ್ಟೆ ತೊಳೆಯಲು ಬಂದಿದ್ದ ಒಂದೂವರೆ ವರ್ಷದ ಮಗು ಆಕಸ್ಮಿಕವಾಗಿ ಹೊಳೆಯಲ್ಲಿ ಬಿದ್ದು ನೀರುಪಾಲಾದ ಮನ ಕಲಕುವ ಘಟನೆ ನಡೆದಿದೆ.

ತಾಯಿಯ ಜೊತೆಗೆ ಬಟ್ಟೆ ತೊಳೆಯಲು ನದೀ ತೀರಕ್ಕೆ ಬಂದಿದ್ದ ಪುಟ್ಟ ಮಗು ಕಾರ್ತಿಕ ರಮೇಶ ನಾಯ್ಕ ಎಂಬುವವನೇ ಗುಂಡಬಾಳಾ ನದಿ ಪಾಲಾದ ದುರ್ದೈವಿಯಾಗಿದ್ದಾನೆ.

RELATED ARTICLES  ದೇವರ ಆಭರಣ ನಾಪತ್ತೆ ಪ್ರಕರಣ: ಸಹಾಯಕ ಅರ್ಚಕರು ಪೊಲೀಸ್ ಬಲೆಗೆ

ರವಿವಾರ ಮಧ್ಯಾಹ್ನ ಈತ ತನ್ನ ತಾಯಿ ಶೃತಿ ರಮೇಶ ನಾಯ್ಕ ಬಟ್ಟೆ ತೊಳೆಯಲು ಮನೆಯ ಸಮೀಪದ ಗುಂಡಬಾಳಾ ನದಿಯ ಬಳಿ ತೆರಳಿದಾಗ ತಾಯಿಯ ಜೊತೆಯೇ ಕಾರ್ತಿಕ್ ಹೆಜ್ಜೆ ಹಾಕಿದ್ದ ಎನ್ನಲಾಗಿದೆ.

ತಾಯಿಬಟ್ಟೆ ತೊಳೆಯುತ್ತಿರುವಾಗ ಪಕ್ಕದಲ್ಲಿಯೇ ಇದ್ದ ಮಗು ಆಕಸ್ಮಿಕವಾಗಿ ನೀರಲ್ಲಿ ಬಿದ್ದಿದ್ದಾನೆ ಎನ್ನಲಾಗಿದೆ. ನೀರಿನಲ್ಲಿ ಬಿದ್ದು ಮಗು ಮೃತಪಟ್ಟಿರ ಬಹುದೆಂದು ಶಂಕಿಸಲಾಗಿದ್ದು, ಮಗುವಿನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಕಂದನನ್ನು ಕಳೆದುಕೊಂಡ
ತಾಯಿಯ ಆಕ್ರಂದನ ಮುಗಿಲುಮುಟ್ಟಿದೆ.

RELATED ARTICLES  ನಾಪತ್ತೆಯಾದ ಮೀನುಗಾರರ ಹುಡುಕಾಟಕ್ಕಾಗಿ ವಿಶೇಷ ಕಾಳಜಿ ವಹಿಸಬೇಕೆಂದು ಕೋರಿ ಪತ್ರ ಬರೆದ ಶಾಸಕ ಸುನೀಲ್ ನಾಯ್ಕ

ವಿಷಯ ತಿಳಿಯುತ್ತಿದ್ದಂತೆ ಮಗುವಿನ ಕುಟುಂಬಸ್ಥರು ಹಾಗೂ ಸುತ್ತಮುತ್ತಲ ಜನರು ನದಿಯ ಸಮೀಪಕ್ಕೆ ಧಾವಿಸಿ ಬಂದಿದ್ದಾರೆ. ಆದರೆ ಮಗು ಇನ್ನೂ ಪತ್ತೆಯಾಗದೇ ಇರುವುದರಿಂದ ಸಾರ್ವಜನಿಕರೂ ಮೂಕರಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಹೊನ್ನಾವರ ಠಾಣೆಯ ಪೊಲೀಸರು ಹಾಗೂ
ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮಗುವಿನ ಹುಡುಕಾಟದಲ್ಲಿ ತೊಡಗಿದ್ದಾರೆ.