ಕುಮಟಾ : ಮಾಜಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಳಿಯಾಳ ಕ್ಷೇತ್ರದ ಶಾಸಕರು, ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರಾದ ಆರ್.ವಿ.ದೇಶಪಾಂಡೆಯವರು ಇಂದು ಕುಮಟಾದ ನಾಡುಮಾಸ್ಕೇರಿ ಭಾಗದ ನೆರೆಪೀಡಿತ ಪ್ರದೇಶಗಳಿಗೆ ಭೇಟಿನೀಡಿದರು. ಈ ಸಂದರ್ಭದಲ್ಲಿ ಕ ನಾಡುಮಾಸ್ಕೇರಿ ಹಾಗೂ ಕುಮಟಾದ ಇತರ ಭಾಗಗಳಲ್ಲಿ ನೆರೆಹಾವಳಿಯಿಂದ ಉಂಟಾದ ಹಾನಿಯ ಕುರಿತು ಮಾಹಿತಿ ನೀಡಲಾಯಿತು ಅಲ್ಲದೆ ಸರ್ಕಾರದಿಂದ ಹೆಚ್ಚಿನ ಒದಗಿಸಲು ಪ್ರಯತ್ನಿಸುವಂತೆ ಮನವಿ ಮಾಡಲಾಯಿತು.

ಸಮಸ್ಯೆ ಆಲಿಸಿದ ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆಯವರು ಮೊದಲಿಗೆ ಹಾಜರಿದ್ದ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿಯನ್ನು ಪಡೆದು, ಸೂಕ್ತ ಪರಿಹಾರ ಒದಗಿಸಲು ಸರ್ಕಾರದ ಮೇಲೆ ವಿಧಾನಸಭೆಯ ಒಳಗೂ ಹಾಗೂ ಹೊರಗೂ ಹೆಚ್ಚಿನ ಒತ್ತಡ ಹಾಕಲಾಗುವುದು ಎಂದು ತಿಳಿಸಿದರು. ಹಾಗೂ ನೆರೆಪೀಡಿತರಿಗೆ ಸಾಂತ್ವನ ಹೇಳಿದರು.

RELATED ARTICLES  ಬೆಳ್ಳಿಯ ಪದಕ ಪಡೆದ ರಕ್ಷಿತ್

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾಂಗ್ರೆಸ್ ಪ್ರಮುಖರಾದ ರವಿಕುಮಾರ್ ಎಂ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಮುಖಂಡರಾದ ಹೊನ್ನಪ್ಪ ನಾಯಕ, ನಾಗೇಶ್ ನಾಯ್ಕ, ರತ್ನಾಕರ ನಾಯ್ಕ, ಹನೀಫ್ ಸಾಬ್, ಸುರೇಖಾ ವಾರೇಕರ್, ಮುಜಾಫರ್ ಶೇಖ್, ವೀಣಾ ನಾಯಕ, ಶಶಿಕಾಂತ ನಾಯ್ಕ, ನಾಗರಾಜ್ ನಾಯ್ಕ, ಚಂದ್ರಹಾಸ ನಾಯಕ,ಎಂ‌.ಟಿ.ನಾಯ್ಕ, ನಿತ್ಯಾನಂದ ನಾಯ್ಕ, ರಾಘವೇಂದ್ರ ಪಟಗಾರ, ಮುರ್ಕಂಡಿ ಗೌಡ, ಫೆಲಿಕ್ಸ ಫರ್ನಾಂಡಿಸ್, ಜಯಂತ ನಾಯ್ಕ , ಶಾಂತಾರಾಮ ನಾಯ್ಕ, ಕೃಷ್ಣಾನಂದ ನಾಯ್ಕ, ಮಹಾಬಲೇಶ್ವರ ಗೌಡ, ವಿಜಯ ಹೊಸ್ಕಟ್ಟಾ, ವಿಜಯಾ ನಾಯ್ಕ, ಜಟ್ಟಿ ನಾಯ್ಕ, ವೀಣಾ ಆಗೇರ್, ಇಸ್ಮಾಯಿಲ್ ಶೇಖ್, ರೇಣುಕಾ ನಾಯಕ, ಗೋಪಾಲ ಬಾಂದೇಕರ್, ಮಾರುತಿ ತಾಂಡೇಲ್, ಹೆಲ್ಜಿನ್ ಫರ್ನಾಂಡಿಸ್, ವೆಂಕಟ್ರಮಣ ನಾಯಕ, ಸಂತೋಷ ನಾಯ್ಕ, ಸಚಿನ್ ನಾಯ್ಕ ಮುಂತಾದವರು ಹಾಜರಿದ್ದರು.

RELATED ARTICLES  "ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ"ಗೆ ಶಿಕ್ಷಕ, ನಿರೂಪಕ ರವೀಂದ್ರ ಭಟ್ಟ ಸೂರಿ ಆಯ್ಕೆ.