ಹೊನ್ನಾವರ: ನಿನ್ನೆ ರವಿವಾರ ಮಧ್ಯಾಹ್ನ ತಾಲೂಕಿನ ಗುಂಡಬಾಳ ಸಮೀಪ ತಾಯಿಯೊಂದಿಗೆ ಬಟ್ಟೆ ತೊಳೆಯಲು ಬಂದ ಬಾಲಕ ನೀರುಪಾಲಾಗಿದ್ದ. ಶೋಧಕಾರ್ಯ ನಡೆದಿದ್ದು ಇಂದು ಮದ್ಯಾಹ್ನ 1 ಘಂಟೆಯ ಸುಮಾರಿಗೆ ಬಾಲಕನ ಶವ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ತಾಲೂಕಿನ ಹಾಡಗೇರಿಯ ತಮ್ಮ ಮನೆಯ ಎದುರು ಇರುವ ಗುಂಡಬಾಳ ನದಿಯಲ್ಲಿ ನಿನ್ನೆ ಮಧ್ಯಾಹ್ನ ತಾಯಿಯೊಂದಿಗೆ ಬಟ್ಟೆ ತೊಳೆಯಲು ಬಂದ ಬಾಲಕ ನೀರುಪಾಲಾಗಿದ್ದ.

ಹಾಡಗೇರಿಯ ಶೃತಿ ರಮೇಶ ನಾಯ್ಕ ಇವರು ಮನೆ ಸಮೀಪದ ಗುಂಡಬಾಳ ನದಿ ತೀರದಲ್ಲಿ ಬಟ್ಟೆ ತೊಳೆಯಲು ಆಗಮಿಸಿದ್ದರು. ತಾಯಿಯೊಂದಿಗೆ ಆಗಮಿಸಿದ ಒಂದುವರೆ ವರ್ಷದ ಮಗ ಕಾರ್ತಿಕ ನಾಯ್ಕ ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿದ್ದ, ನದಿಯಲ್ಲಿ ಕೊಚ್ಚಿ ಹೋದ ಹುಡುಗನಿಗಾಗಿ ಹುಡುಕಾಟ ನಡೆದಿತ್ತು.

RELATED ARTICLES  ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ನಿಧನ!

ಇಂದು ಹಾಡಗೇರಿಯಲ್ಲಿ ನೀರಿನಲ್ಲಿ ಬಿದ್ದು ನಾಪತ್ತೆಯಾಗಿದ್ದ ಕಾರ್ತಿಕ ರಮೇಶ ನಾಯ್ಕ ಮೃತ ದೇಹ ಬಿದ್ದ ಜಾಗದಿಂದ ಸುಮಾರು ಅರ್ಧ ಕಿ. ಮೀ. ದೂರದಲ್ಲಿ ಸಿಕ್ಕಿದೆ. ಹಿಂಡಿಗೆ ಸಿಕ್ಕಿ ಹಾಕಿಕೊಂಡು ತೇಲುತ್ತಿದ್ದು ಎನ್ನಲಾಗಿದೆ.

RELATED ARTICLES  ಭಾರತದೊಂದಿಗೆ ಮುಖ್ಯ ರಕ್ಷಣಾ ಒಪ್ಪಂದಗಳನ್ನು ಯಶಸ್ವಿಗೊಳಿಸಲು ಅಮೆರಿಕ ಉತ್ಸುಕ!

ಹೊನ್ನಾವರ ಪೋಲಿಸ್ ಠಾಣೆ ಯ ಸಿಪಿಐ ಶ್ರೀಧರ ಎಸ್.ಆರ್ ಹಾಗೂ ಪಿಎಸೈ ಶಶಿಕುಮಾರ ನೇತ್ರತ್ವದಲ್ಲಿ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ನಡೆಸಿದ್ದು, ಇಂದು ಬಾಲಕನ ಶವ ಪತ್ತೆಯಾಗಿದೆ.

ಮೃತ ಬಾಲಕನ ತಾಯಿ ಬಳ್ಳಾರಿಗೆ ಮದುವೆ ಮಾಡಿ ಕೊಡಲಾಗಿತ್ತು. ಹಾಲಿ ಇವರು ತಾಯಿ ಮನೆ ಹಾಡಗೇರಿಯಲ್ಲೇ ವಾಸ್ತವ್ಯ ಇದ್ದರು ಎಂದು ತಿಳಿದು ಬಂದಿದೆ.