ಕುಮಟಾ : ಕರ್ನಾಟಕ ಕೊಂಕಣಿಸಾಹಿತ್ಯ ಅಕಾಡೆಮಿಯ 2021 ನೇ ಸಾಲಿಗೆ ಗೌರವ ಪುರಸ್ಕಾರ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ಅಗಷ್ಟ 1 ನೇತಾರೀಖು ಭಾನುವಾರ ಜರುಗಿತು.
ಈ ಕಾರ್ಯಕ್ರಮದಲ್ಲಿ ಉತ್ತರಕನ್ನಡ ಜಿಲ್ಲೆಯವರಾದ ಅರುಣ ಸುಬ್ರಾಯ ಉಭಯಕರ್ ಅವರು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಗೈದ ಸಾಧನೆಯ ಬಗ್ಗೆ ಗೌರವಪುರಸ್ಕಾರ ಪಡೆದರೆ ಯಲ್ಲಾಪುರ ತಾಲೂಕಿನ ಕೋಟೆಮನೆಯ ಲಕ್ಷ್ಮೀ ಸಿದ್ಧಿ ಇವರು ಕೊಂಕಣಿ ಜನಪದ ಕ್ಷೇತ್ರದಲ್ಲಿ ಗೈದ ಸಾಧನೆಗಾಗಿ ಪುರಸ್ಕೃತರಾದರು. ಪುರಸ್ಕಾರವು ನಗದು 50 ಸಾವಿರ ಹಾಗೂ ಫಲಕ ಪ್ರಶಸ್ತಿಗಳನ್ಮು ಒಳಗೊಂಡಿದೆ ಉಳಿದಂತೆ ಪುತ್ತೂರು ಪಾಂಡುರಂಗ ನಾಯಕರು ಕಲಾ ಕ್ಷೇತ್ರದಲ್ಲಿ ಪುರಸ್ಕಾರ ಪಡೆದರೆ ಪುಸ್ತಕ ಬಹುಮಾನವನ್ನು ಸ್ಟೀಫನ್ ಕ್ವಾಡ್ರಸ್,ಪ್ರೇಮ್ ಮೊರಾಸ್. ಮೊನಿಕಾ ಡೆಸಾ ಪಡೆದಿದ್ದಾರೆ.
ಕೋವಿಡ್ ನಿಯಮಾನು ಸಾರ ನಡೆದ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಪರಿಷದ್ ಸದಸ್ಯ ಪ್ರತಾಪಸಿಂಹ ನಾಯಕ,ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ರಹೀಮ್ ಉಚ್ಚಲ ಕೊಂಕಣಿ ಸಾಹಿತಿ ಹೆನ್ರಿ ಡಿಸೆಲ್ವ,ಕೊಂಕಣಿ ಅಕಾಡೆಮಿಯ ಅಧ್ಯಕ್ಷ ಡಾಕ್ಟರ್ ಜಗದೀಶ ಪೈ , ರಿಸ್ಟ್ರಾರ ಮನೋಹರ ಕಾಮತ ,ಮಾಜಿ ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಉತ್ತರಕನ್ನಡದಿಂದ ಅಕಾಡೆಮಿ ಸದಸ್ಯರುಗಳಾದ ವಸಂತ ಬಾಂದೇಕರ ಹಾಗೂ ಚಿದಾನಂದ ಭಂಡಾರಿ ಕಾಗಾಲ ಇವರನ್ನು ಒಳಗೊಂಡಂತೆ ಉಳಿದ ಸದಸ್ಯರು ಉಪಸ್ಥಿತರಿದ್ದರು.