ಕಾರವಾರ : ಉತ್ತರಕನ್ನಡದಲ್ಲಿ ಕೊರೋನಾ ಏರಿಳಿತ ಮುಂದುವರೆದಿದೆ. ಉತ್ತರಕನ್ನಡದಲ್ಲಿ ಇಂದು ಮತ್ತೆ ಕರೋನಾ ಪ್ರಕರಣ ಏರಿಕೆಗೊಂಡಿದ್ದು, ಕಳೆದ ಎರಡು ಮೂರು ವಾರಗಳಿಗಿಂತ ಹೆಚ್ಚು ಪ್ರಕರಣ ದಾಖಲಾಗಿದೆ.
ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ನ ಪ್ರಕಾರ ಇಂದು 81 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ.
ಇಂದಿನ ಹೆಲ್ತ ಬುಲೆಟಿನ್ ಪ್ರಕಾರ ಓರ್ವರು ಕೊರೋನಾಕ್ಕೆ ಬಲಿಯಾಗಿದ್ದು ಶಿರಸಿಯಲ್ಲಿ 1 ಸಾವಾಗಿದ್ದು, ಉತ್ತರ ಕನ್ನಡದಲ್ಲಿ ಈ ವರೆಗೆ ಸಾವಿಗೀಡಾದವರ ಸಂಖ್ಯೆ 735 ಆಗಿದೆ.
ಹೆಲ್ತ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 9, ಅಂಕೋಲಾದಲ್ಲಿ 32, ಕುಮಟಾದಲ್ಲಿ 11, ಹೊನ್ನಾವರ 2, ಭಟ್ಕಳದಲ್ಲಿ 8, ಶಿರಸಿಯಲ್ಲಿ 11, ಸಿದ್ದಾಪುರದಲ್ಲಿ 3, ಯಲ್ಲಾಪುರದಲ್ಲಿ 2, ಮುಂಡಗೋಡ 1, ಹಳಿಯಾಳದಲ್ಲಿ 1, ಮತ್ತು ಜೋಯಿಡಾದಲ್ಲಿ 1 ಒಟ್ಟೂ 81 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 452 ಆಗಿದ್ದು, ಅವರಲ್ಲಿ 48 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 404 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.
ಕಾರವಾರ 2, ಅಂಕೋಲಾ 8, ಕುಮಟಾ 14, ಹೊನ್ನಾವರ 6, ಭಟ್ಕಳ 4, ಶಿರಸಿ 4, ಸಿದ್ದಾಪುರ 0, ಯಲ್ಲಾಪುರ 1, ಮುಂಡಗೋಡ 0, ಹಳಿಯಾಳ 0, ಜೋಯ್ಡಾ 0 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 39 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.
ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ ಅಂಕೋಲಾದಲ್ಲಿ ಅತಿ ಹೆಚ್ಚು ಅಂದರೆ 32 ಜನರಲ್ಲಿ, ಕುಮಟಾ, ಶಿರಸಿ ಎರಡನೆಯ ಸ್ಥಾನ ಅಂದರೆ ತಲಾ 11 ಜನರಲ್ಲಿ ಕರೋನಾ ಕಾಣಿಸಿಕೊಂಡಿದೆ.
ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.