ಗೋಕರ್ಣ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ , ಈಜಲು ತೆರಳಿದ ವೇಳೆ ನೀರಿನ‌ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ಘಟನೆ ಗೋಕರ್ಣದ ಪ್ಯಾರಡೈಸ್ ಬೀಚ್ ನಲ್ಲಿ ನಡೆದಿದೆ.

ಅದ್ವೈತ್ ಜೈನ್ ಮೃತ ಯುವಕ ಎಂದು ತಿಳಿದುಬಂದಿದೆ.‌ಈತ ಮುಂಬೈಯಿಂದ ಆರು ಜನ ಸ್ನೇಹಿತರೊಂದಿಗೆ ಗೋಕರ್ಣಕ್ಕೆ ಬಂದಿದ್ದ. ಈಜಲು ಸ್ನೇಹಿತರೊಂದಿಗೆ ತೆರಳಿದ್ದಾಗ ಸಮುದ್ರದ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

RELATED ARTICLES  ಭಟ್ಕಳದಲ್ಲಿ ಮತ್ತೆ ಏಳು ಜನರಿಗೆ ಪಾಸಿಟೀವ್ : ಮುಂದುವರಿದ ಕರೋನಾ ರಣಕೇಕೆ..!

ಘಟನೆಯ ಸ್ಥಳಕ್ಕೆ ಗೋಕರ್ಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಎಷ್ಟೆ ಎಚ್ಚರಿಕೆ ನೀಡುತ್ತಿದ್ದರೂ ಅವೆಲ್ಲವನ್ನೂ ಲೆಕ್ಕಿಸದೆ ನೀರಿಗಿಳಿದು ಪ್ರವಾಸಿಗರು ಅಪಘಾತವನ್ನು ಮೈಮೇಲೆ ಎಳೆದುಕೊಳ್ಳುವುದು ದುರದೃಷ್ಟದ ಸಂಗತಿಯಾಗಿದೆ.

RELATED ARTICLES  ಹೊನ್ನಾವರದ ಅಗ್ರಹಾರದಲ್ಲಿ ಭೀಕರ ರಸ್ತೆ ಅಪಘಾತ: ಹಾರಿಹೋಯ್ತು ಓರ್ವನ ಪ್ರಾಣ.