ಭಟ್ಕಳ: ಮಾನಸಿಕ ಅಸ್ವಸ್ಥನೋರ್ವ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿದ ಘಟನೆ ತಾಲೂಕಿನ ಮುಠಳ್ಳಿಯಲ್ಲಿ ನಡೆದಿದೆ. ಮುಠಳ್ಳಿಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಮಹಿಳೆಯರ ಮೇಲೆ ಹಲ್ಲೆಗೆ ಮುಂದಾಗಿದ್ದ ವ್ಯಕ್ತಿಯು ತಡೆಯಲು ಹೋದವರ ಮೇಲೆ ಹಲ್ಲೆ ಮಾಡಿದ ಎನ್ನಲಾಗಿದೆ.
ಈತನ ಹಲ್ಲೆಯಿಂದ ಭಾಸ್ಕರ ನಾಯ್ಕ ಎನ್ನುವವರಿಗೆ ತೀವ್ರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತನ ಉಪಟಳವನ್ನು ನೋಡಿ ತಕ್ಷಣ 112ಕ್ಕೆ ಕರೆ ಮಾಡಿದ್ದರಿಂದ ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನು ನಿಯಂತ್ರಿಸಲು ಹರಸಾಹಸ ಪಟ್ಟ ಘಟನೆ ನಡೆಯಿತು. ಈತ ಮಹಾರಾಷ್ಟ್ರದಿಂದ ಯಾವುದೋ ರೈಲಿನಲ್ಲಿ ಬಂದು ಭಟ್ಕಳದಲ್ಲಿ ಇಳಿದುಕೊಂಡಿದ್ದಾನೆಂದು ಶಂಕಿಸಲಾಗಿದೆ. ಈತನ ಹೆಸರು ಮಾದೇವ ಸೀತಾರಾಮ ರಾಠೋಡ್ ಎನ್ನಲಾಗುತ್ತಿದ್ದು ವಿವರ ತಿಳಿದು
ಬರಬೇಕಿದೆ.