10ನೇ ತರಗತಿ ಉತ್ತೀರ್ಣರಾದವರಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ ಒಟ್ಟೂ 250 ಅನುಯಾಯಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಅನುಯಾಯಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಸಂಖ್ಯೆ, ಆಯ್ಕೆ ಪ್ರಕ್ರಿಯೆ, ಅರ್ಜಿ ದಿನಾಂಕ, ಶುಲ್ಕ ವಿವರ, ಮುಂತಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಮುಂದೆ ನೀಡಲಾಗಿದೆ. ವಿವರವಾದ ಮಾಹಿತಿಗೆ ಅಧಿಸೂಚನೆ ನೋಡಿ.
ಸೂಚನೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿ, ಅರ್ಥೈಸಿ ನಂತರ ಅರ್ಜಿ ಸಲ್ಲಿಸತಕ್ಕದ್ದು.
•ಒಟ್ಟು ಹುದ್ದೆಗಳು : 250
•ಹುದ್ದೆಯ ಹೆಸರು : ಅನುಯಾಯಿ
•ವರ್ಗವಾರು ಹುದ್ದೆಗಳ ಸಂಖ್ಯೆ :
1. ಅಡಿಗೆಯವರು : 81
2. ಕ್ಷೌರಿಕ : 45
3. ದೋಬಿ : 53
4. ಕಸ ಗುಡಿಸುವವರು : 58
5. ನೀರು ತರುವವರು : 13
•ವಿದ್ಯಾರ್ಹತೆ : 10 ನೇ ತರಗತಿ ಪಾಸ್ ಆಗಿರಬೇಕು.
•ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್
•ವಯೋಮಿತಿ : ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ (ದಿನಾಂಕ 30-08-1991 ರಿಂದ 30-08-2003 ರ ನಡುವೆ ಜನಿಸಿರಬೇಕು)
ಎಸ್‌ಟಿ (Tribal), ಎಸ್‌ಸಿ, ಪ್ರವರ್ಗ-1, 2A, 2B, 3A, 3B ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ.
•ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 30-07-2021
•ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30-08-2021
•ಆನ್‌ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನಾಂಕ : 01-09-2021
•ಅರ್ಜಿ ಶುಲ್ಕ : ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ ರೂ.250. ST / SC / CAT-1 ಅಭ್ಯರ್ಥಿಗಳಿಗೆ ರೂ.100
•ನೇಮಕಾತಿ ವಿಧಾನ : ದೈಹಿಕ ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ.ಲಿಖಿತ ಪರೀಕ್ಷೆ ಇರುವುದಿಲ್ಲ.
•ದೇಹದಾರ್ಢ್ಯ ಪರೀಕ್ಷೆ ಅರ್ಹತೆ ವಿವರ :
ಕನಿಷ್ಠ ಎತ್ತರ : 170 ಸೆಂ.ಮೀ.
ಕನಿಷ್ಠ ಎದೆ ಸುತ್ತಳತೆ : 86 ಸೆಂ.ಮೀ (ಪೂರ್ತಿ ವಿಸ್ತರಿಸಿದಾಗ ಕನಿಷ್ಠ ವಿಸ್ತರಣೆ 5 ಸೆಂ.ಮೀ).
•ದೈಹಿಕ ಸಹಿಷ್ಣುತೆ ಪರೀಕ್ಷೆ ವಿವರ :
400 ಮೀಟರ್ ಓಟ : 1 ನಿಮಿಷ 30 ಸೆಕೆಂಡ್ ಮೀರದಂತೆ ಓಡಬೇಕು.
ಉದ್ದ ಜಿಗಿತ : 3.80 ಮೀಟರ್‌ಗಿಂತ ಕಡಿಮೆ ಇಲ್ಲದಂತೆ ಜಿಗಿಯಬೇಕು.
ಗುಂಡು ಎಸೆತ (4 KG) : 5.60 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.
•ವೆಬ್‌ಸೈಟ್ : https://recruitment.ksp.gov.in
•ವೇತನ ಶ್ರೇಣಿ : ರೂ.18,600 ಇಂದ 32,600 ರೂ