ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಅಂದರೆ ಒಟ್ಟು 5,600 ವಾಕ್ಸಿನ್ ಲಭ್ಯವಿದೆ. ಇವುಗಳಲ್ಲಿ 4,100 ಕೋವಾಕ್ಸಿನ್ ಮತ್ತು 1500 ಕೋವಾಕ್ಸಿನ್ ಡೋಸ್ ಎಂದು ತಿಳಿದುಬಂದಿದೆ. ಅಂಕೋಲಾದಲ್ಲಿ 300, ಭಟ್ಕಳ 400, ಹಳಿಯಾಳ 250, ಹೊನ್ನಾವರ 400 + 200, ಜೋಯ್ಡಾ 250, ಕಾರವಾರ 400+300, ಮುಂಡಗೋಡ 300, ಕುಮಟಾ 400+200, ಶಿರಸಿ 400+200, ಸಿದ್ದಾಪುರ 300, ಯಲ್ಲಾಪುರ 250, ದಾಂಡೇಲಿ 250+200,ಜಿಲ್ಲಾ ಕೇಂದ್ರದಲ್ಲಿ 20+200, ನೇವಿಯಲ್ಲಿ 200 ಡೋಸ್ ಸಿಗಲಿದೆ.
ಕುಮಟಾದಲ್ಲಿ ಎಲ್ಲೆಲ್ಲಿ?
ಕುಮಟಾ: ತಾಲೂಕಿನ ಸರ್ಕಾರಿ ಆಸ್ಪತ್ರೆ 100, ಕೋಡ್ಕಣಿ ಪ್ರಾಥಮಿಕ ಆರೋಗ್ಯಕೇಂದ್ರದ ಮಾಸೂರು ಪ್ರೌಢಶಾಲೆ 100, ಕಾಗಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳ್ಕಾರ HPS 100, ಸಂತೇಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರ 50, ಹಿರಿಯ ಪ್ರಾಥಮಿಕ ಶಾಲೆ ಕೂಜಳ್ಳಿ 50 ಸೇರಿ ಒಟ್ಟು 400 ಕೋವಿಶೀಲ್ಡ್ ಸೆಕೆಂಡ್ ಡೋಸ್ ಮಾತ್ರವೇ ಲಭ್ಯವಿದೆ. ಅಲ್ಲದೆ, ಡಾ. ಎ.ವಿ ಬಾಳಿಗಾ ಕಾಮರ್ಸ್ ಕಾಲೇಜಿನಲ್ಲಿ 200 ಕೋವಾಕ್ಸಿನ್ ಲಸಿಕೆ ಲಭ್ಯವಿದೆ. ( ಎರಡನೆ ಡೋಸ್ ಮಾತ್ರ )
ಅಂಕೋಲಾದಲ್ಲಿ ಎಲ್ಲೆಲ್ಲಿ?
ಅಂಕೋಲಾ: ಆಗಸ್ಟ್ 5ರಂದು ಗುರುವಾರ ತಾಲೂಕಿನಲ್ಲಿ ವಿತರಿಸಲು, ಒಟ್ಟು 300 ಡೋಸ್ ಲಸಿಕೆ ಲಭ್ಯವಿದೆ. ಅವುಗಳಲ್ಲಿ ಅವರ್ಸಾಕ್ಕೆ ಪ್ರಥಮ ಡೋಸ್ (80), ದ್ವಿತೀಯ ಡೋಸ್(70), ನದಿಭಾಗ ಪ್ರಥಮ ಡೋಸ್ (80), ದ್ವಿತೀಯ ಡೋಸ್ (70) ಹಂಚಿಕೆ ಮಾಡಲಾಗಿದೆ ಎಂದು ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.