ಕಾರವಾರ: ಉತ್ತರಕನ್ನಡದ ಪ್ರಮುಖ ತಾಲೂಕುಗಳಾದ ಹೊನ್ನಾವರ ಹಾಗೂ ಸಿದ್ದಾಪುರಗಳಲ್ಲಿ ನಾಳೆ‌ ಎಲ್ಲೆಲ್ಲಿ ಕೋವಿಡ್ ಲಸಿಕೆಉ ಲಸಿಕಾಕರಣ ನಡೆಯಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಅವುಗಳು ಈ ಕೆಳಗಿನಂತಿವೆ.

ಹೊನ್ನಾವರದಲ್ಲಿ ಎಲ್ಲೆಲ್ಲಿ?

ಹೊನ್ನಾವರ ತಾಲೂಕು ಆಸ್ಪತ್ರೆಯ ವತಿಯಿಂದ ಪಕ್ಕದ ಮಾರಥೊಮಾ ಶಾಲೆಯಲ್ಲಿ 300 ಕೋವಿಶೀಲ್ಡ್, 100 ಕೋವಾಕ್ಸಿನ್ ವಿತರಿಸಲಾಗುವುದು. ಹೊನ್ನಾವರ ತಾಲ್ಲೂಕಿನಲ್ಲಿ ನಾಳೆ ಕೋವಿಶೀಲ್ಡ್- 400. ಕೋವ್ಯಾಕ್ಸಿನ್-200 ಸೇರಿ ಒಟ್ಟು 600 ಲಸಿಕೆ ಲಭ್ಯವಿದೆ. ಈ ಲಸಿಕೆಗಳು ಗರ್ಭಿಣಿಯರಿಗೆ, ಬಾಳಂತಿಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.

RELATED ARTICLES  ದಿನಾಂಕ 05/07/2019 ರ ದಿನ ಭವಿಷ್ಯ.

ಮಂಕಿ ಆಸ್ಪತ್ರೆಯಲ್ಲಿ 50 ಕೋವಿಶೀಲ್ಡ್ ಮಿನುಗಾರರಿಗೆ ಮತ್ತು 100 ಕೋವ್ಯಾಕ್ಸಿನ್ ಎರಡನೆಯ ಡೋಸ್ ನವರಿಗೆ ವಿತರಿಸಲಾಗುತ್ತದೆ. ಖರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 50 ಕೋವಿಶೀಲ್ಡ್ ಡೋಸ್ ಲಭ್ಯವಿದೆ.

ಸಿದ್ದಾಪುರದಲ್ಲಿ ಎಲ್ಲೆಲ್ಲಿ?

ಸಿದ್ದಾಪುರ ತಾಲೂಕಿನ ಕಾನಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಉಪಕೇಂದ್ರ ತ್ಯಾಗಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100 ಡೋಸ್ ಕೋವಿಶೀಲ್ಡ್ ಲಸಿಕೆ ಇದೆ. ಕಾನಸೂರಿನ ರುದ್ರ ಆಂಜನೇಯ ದೇವಸ್ಥಾನದಲ್ಲಿ 200 ಡೋಸ್ ಕೋವಿಶೀಲ್ಡ್ ವಾಕ್ಸಿನ್ ಲಭ್ಯವಿದೆ.

RELATED ARTICLES  ಸಿದ್ಧರಾಮಯ್ಯ ವಿರುದ್ದ ಚಾರ್ಜ್‌ಶೀಟ್‌ ಸಲ್ಲಿಕೆಯಲ್ಲೂ ಯಡವಟ್ಟು ಮಾಡಿಕೊಂಡ BJP !

ಉತ್ತರಕನ್ನಡದ ಲಸಿಕಾ ವಿವರ

ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 5,600 ವಾಕ್ಸಿನ್ ಲಭ್ಯವಿದೆ. ಇವುಗಳಲ್ಲಿ 4,100 ಕೋವಾಕ್ಸಿನ್ ಮತ್ತು 1500 ಕೋವಾಕ್ಸಿನ್ ಡೋಸ್ ಎಂದು ತಿಳಿದುಬಂದಿದೆ. ಅಂಕೋಲಾದಲ್ಲಿ 300, ಭಟ್ಕಳ 400, ಹಳಿಯಾಳ 250, ಹೊನ್ನಾವರ 400 + 200, ಜೋಯ್ಡಾ 250, ಕಾರವಾರ 400+300, ಮುಂಡಗೋಡ 300, ಕುಮಟಾ 400+200, ಶಿರಸಿ 400+200, ಸಿದ್ದಾಪುರ 300, ಯಲ್ಲಾಪುರ 250, ದಾಂಡೇಲಿ 250+200,ಜಿಲ್ಲಾ ಕೇಂದ್ರದಲ್ಲಿ 20+200, ನೇವಿಯಲ್ಲಿ 200 ಡೋಸ್ ಸಿಗಲಿದೆ.