ಹೊನ್ನಾವರ : ಬಾಗಲಕೋಟದಲ್ಲಿ ಕೆವಿಜಿ ಬ್ಯಾಂಕ್ ರೀಜನಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹೊನ್ನಾವರ ತಾಲೂಕಿನ ಮಂಕಿ ಮೂಲದ ದೇವಿದಾಸ ಚಿಕ್ಕರಮನೆ ಮತ್ತು ಅವರ ಪತ್ನಿ ಸ್ವಾತಿ ಚಿಕ್ಕರಮನೆ ಇವರ ಮೇಲೆ ನಿನ್ನೆ ಮಾರಣಾಂತಿಕ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದೆ.

ರಾತ್ರಿ ನಡೆದ ಹಲ್ಲೆಯಿಂದ ದೇವಿದಾಸ ಚಿಕ್ಕರಮನೆ ಮತ್ತು ಅವರ ಪತ್ನಿ ಸ್ವಾತಿ ಚಿಕ್ಕರಮನೆ ಮಾಮೂಲಿನಂತೆ ಅವರ ಭಾವ ಡಾ. ರಾಜೇಶ ಕಿಣಿ ದಂಪತಿಗಳು ಫೋನ್ ಮಾಡಿದಾಗ ಆ ಕಡೆಯಿಂದ ಪ್ರತಿಕ್ರಿಯೆ ಬರದ ಕಾರಣ ಅಕ್ಕಪಕ್ಕದವರನ್ನು ವಿಚಾರಿಸಿ ಅವರು ಸ್ಥಳಕ್ಕೆ ಹೋಗಿ ನೋಡಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಿಕ್ಕರಮನೆ ದಂಪತಿಗಳು ಕಂಡುಬಂದರು.

RELATED ARTICLES  ಕಲಿಕೆಯೊಂದಿಗೆ ಕಲಿಯುವ ಪ್ರಕ್ರಿಯೆಯನ್ನು ಆನಂದಿಸಿದಾಗ ಯಶಸ್ಸು ಸಾಧ್ಯ : ರಾಘವೇಂದ್ರ ನಾಯ್ಕ.

ಕೂಡಲೇ ಪೋಲೀಸರಿಗೆ ಮತ್ತು ಸಂಬಂಧಿಸಿದವರಿಗೆ ತಿಳಿಸಲಾಯಿತು. ಚಿಕಿತ್ಸೆಯ ನಂತರ ದೇವಿದಾಸ ಚಿಕ್ಕರಮನೆಯವರಿಗೆ ಪ್ರಜ್ಞೆ ಬಂದಿದ್ದು ಅವರ ಮಡದಿಗೆ ಪ್ರಜ್ಞೆ ಬಂದಿಲ್ಲ. ಚಿಕ್ಕರಮನೆ ಇವರು ಹೊನ್ನಾವರ ಸಹಿತ ಹಲವು ಕಡೆ ಕೆವಿಜಿ ಬ್ಯಾಂಕ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿ ಸದ್ಯ ಬಾಗಲಕೋಟದಲ್ಲಿದ್ದರು.

RELATED ARTICLES  ಹಸುಗೂಸಿನೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ.

ಮೂರು ತಿಂಗಳ ಹಿಂದಷ್ಟೆ ಮಗಳ ಮದುವೆ ಮಾಡಿದ್ದರು. ಮನೆಯಲ್ಲಿರುವ ನಗನಾಣ್ಯ ದೋಚಲೆಂದೋ ಅಥವಾ ಇನ್ನಾವುದೋ ಕಾರಣಕ್ಕೋ ದುಷ್ಕರ್ಮಿಗಳು ಇಬ್ಬರೇ ಇರುವ ಈ ಮನೆ ಹೊಕ್ಕಿ ಗಂಭೀರ ಅಪರಾಧ ಮಾಡಿದ್ದು ಕಾರಣ ತಿಳಿದು ಬರಬೇಕಿದೆ.