ಭಟ್ಕಳ : ಒಂದೆಡೆ ಕರೋನ ಆರ್ಭಟ, ಇನ್ನೊಂದೆಡೆ ಮಳೆಯಿಂದ ಮೀನುಗಾರರಿಗೆ ಸಮಸ್ಯೆ, ಹೀಗೆ ಮೀನುಗಾರರ ಬದುಕು ಬಹಳ ದುಸ್ತರವಾಗಿದೆ. ಇದರ ಮಧ್ಯೆ ಮೀನುಗಾರಿಕೆಗೆ ತೆರಳಿದಾಗ ಅವಘಡ ಸಂಭವಿಸಿದ್ದು ಮೀನುಗಾರರ ಬದುಕು ಎಷ್ಟು ಕಷ್ಟ ಎನ್ನುವುದನ್ನು ಚಿತ್ರಿಸಿದಂತಿದೆ.
ಮುರ್ಡೇಶ್ವರದ ಅರಬ್ಬಿ ಸಮುದ್ರಲ್ಲಿ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುವ ವೇಳೆ ಅಲೆಯ ರಭಸಕ್ಕೆ ಗಿಲ್ನಟ್ ದೋಣಿ ಮಗುಚಿದ ಕಾರಣ 7 ಮಂದಿ ಮೀನುಗಾರರು ಅಪಾಯದಲ್ಲಿದ್ದ ಘಟನೆ ವರದಿಯಾಗಿದ್ದು, ಈ ಕುರಿತಾದ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಇಲ್ಲಿದೆ.
ಜನಾರ್ದನ ಹರಿಕಾಂತ ಇವರಿಗೆ ಸೇರಿದ ಜಲ ಗಂಗಾ ದೋಣಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ತೆರಳಿ ವಾಪಾಸ್ಸಾಗುವ ವೇಳೆ ಅಲೆಯ ರಭಸಕ್ಕೆ ದೋಣಿ ಮಗುಚಿದ್ದು, ಮೀನುಗಾರರು ಸಮುದ್ರಕ್ಕೆ ಹಾರಿಕೊಂಡು ನಂತರ ಮೀನುಗಾರರು ಮಗುಚಿದ ದೋಣಿಯ ಮೇಲೆ ಕೂತು ಸಹಾಯ ಯಾಚಿಸಿದ್ದಾರೆ.
ದೋಣಿಯಲ್ಲಿದ್ದ 7 ಮೀನುಗಾರರು ಸಮುದ್ರಕ್ಕೆ ಹಾರಿಕೊಂಡು ನಂತರ ಮೀನುಗಾರರು ಮಗುಚಿದ ದೋಣಿಯ ಮೇಲೆ ಕೂತು ಸಹಾಯ ಯಾಚಿಸುತ್ತಿರುವುದನ್ನು ಗಮನಿಸಿದ ದಡದಲ್ಲಿದ್ದ ಮೀನುಗಾರರು ತಕ್ಷಣ ಇನೊಂದು ಬೋಟ್ ಮೂಲಕ 7 ಮಂದಿಯನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ.
ಮುರುಡೇಶ್ವರ ಠಾಣೆ ಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ದೋಣಿ ಮಗುಚಿದ ಕಾರಣ ದೋಣಿಯ ಎಂಜಿನ್ ಹಾಗೂ ಮೀನುಗಾರಿಕೆ ಬಳಸುವ ಬಲೆ ಸೇರಿ ಸುಮಾರು ಒಂದುವರೆ ಲಕ್ಷ ರೂ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ.