ಹೊನ್ನಾವರ: ಹಣ ಕಾಸಿನ ವ್ಯವಹಾರಕ್ಕೆ ಸಂಬಂಧ ಪಟ್ಟಂತೆ ಯುವಕನೋರ್ವನನ್ನು ಅಪಹರಣ ಮಾಡಿದ್ದ ಭಟ್ಕಳ ಮೂಲದ ಈರ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತನ್ನ ತಮ್ಮನನ್ನು ಅಪಹರಣ ಮಾಡಿದ್ದಾರೆ ಎಂದು ಯಾಸೀರ್ ಬಾಜಿ ಎಂಬುವವರ ಅಣ್ಣ ಮಹಮ್ಮದ್ ರಿಯಾಜ್ ಖಾಜಿ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

RELATED ARTICLES  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಲಘು ಹೃದಯಾಘಾತ

ಯಾಸೀರ್ ಮಹ್ಮದ್ ಸಾಹೇಲ್ ಪೆಶಮಾಮ್ ಜೊತೆ 4 ಲಕ್ಷ ಹಣ ಪಡೆದಿದ್ದು, ಕೇವಲ ಒಂದೂವರೆ ಲಕ್ಷ ವಾಪಾಸ್ಸು ನೀಡುವುದಿತ್ತು. ಅದರ ಸಲುವಾಗಿ ಸೋಮವಾರ ಮನೆಯ ಹತ್ತಿರ ಬಂದು ಬಾಕಿ ಹಣ ಕೇಳಿದ್ದು, ಸ್ವಲ್ಪ ದಿನ ಬಿಟ್ಟು ಹಣವನ್ನು ನೀಡುತ್ತೇನೆಂದು ಯಾಸೀರ್ ಹೇಳಿದ. ಆದರೆ ತನಗೆ ಈಗಲೇ ಹಣ ಕೊಡಬೇಕು. ಇಲ್ಲದಿದ್ದರೆ ಕೊಲೆ ಮಾಡದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ, ಬಲವಂತವಾಗಿ ಕಾರಿನಲ್ಲಿ ಕೂರಿಸಿ ಕೊಂಡು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಯಾಸೀರ್ ಅಣ್ಣ ಮಹ್ಮದ್ ರಿಯಾಜ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶೀಘ್ರಗತಿಯಲ್ಲಿ ನಡೆಸಿ ವಾಹನ ಸಮೇತ ಈರ್ವರನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES  ತಾಂತ್ರಿಕ ದೋಷದಿಂದಾಗಿ ಶಿರಸಿಯಲ್ಲಿ ಲ್ಯಾಂಡ್ ಆದ ನೌಕಾಪಡೆಯ ಹೆಲಿಕ್ಯಾಪ್ಟರ್