ಕಾರವಾರ: ಜಿಲ್ಲೆಯಲ್ಲಿ ಆ.6 ಶುಕ್ರವಾರ ಒಟ್ಟೂ 2100 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದೆಂದು ಮಾಹಿತಿ ಲಭ್ಯವಾಗಿದೆ. ಕಾರವಾರದಲ್ಲಿ 300 ಡೋಸ್, ಕುಮಟಾ 700, ಶಿರಸಿ 400, ದಾಂಡೇಲಿ 300, ಜಿಲ್ಲಾಸ್ಪತ್ರೆಯಲ್ಲಿ 200, ನೇವಿಯಲ್ಲಿ 200 ಡೋಸ್ ಕೋವ್ಯಾಕ್ಸಿನ್ ಲಭ್ಯವಿದೆ ಎಂದು ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಮಟಾದಲ್ಲಿ ಎಲ್ಲಿ?

ನಾಳೆ ಕುಮಟಾದಲ್ಲಿ ಒಟ್ಟೂ “700 dose – covaccine” ಲಭ್ಯವಿದ್ದು ಡಾ ಎ.ವಿ ಬಾಳಿಗಾ ಕಾಲೇಜಿನ ವಾಣಿಜ್ಯ ವಿಭಾಗದ ಉಳಿದ ವಿದ್ಯಾರ್ಥಿಗಳು, ಕಲಾ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ, ಡಿಪ್ಲೊಮಾ ವಿದ್ಯಾರ್ಥಿಗಳು ಮತ್ತು ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೇವಲ ಎರಡನೇ ಡೋಸ್ ನೀಡಲಾಗುವುದು.ಡಾ.ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜು ಕುಮಟಾದಲ್ಲಿ ಲಸಿಕಾಕರಣ ನಡೆಯಲಿದೆ. ನಾಳೆ ಕೋವಿಶಿಲ್ಡ ಲಸಿಕೆ ಲಭ್ಯವಿರುವದಿಲ್ಲ ಎಂದು ತಿಳಿಸಲಾಗಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 20-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?.

ಹೊನ್ನಾವರದಲ್ಲಿ ಎಲ್ಲಿ?

ನಾಳೆ ಹೊನ್ನಾವರ ತಾಲೂಕಿನ PHC ಹಳದೀಪುರದಲ್ಲಿ 50 ಡೋಸ್ ಕೋವ್ಯಾಕ್ಸೀನ್ ಲಸಿಕೆ ( ಎರಡನೇ ಡೋಸ್ ಪಡೆಯುವವರಿಗೆ ಮಾತ್ರ) ಹಾಗೂ ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ 30 ಕೋ ವ್ಯಾಕ್ಸಿನ್ ( ಎರಡನೇ ಡೋಸ್ ಪಡೆಯುವವರಿಗೆ ಮಾತ್ರ) ಲಭ್ಯವಿದ್ದು ಅಗತ್ಯ ಇರುವವರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಲಾಗಿದೆ.

RELATED ARTICLES  ತೆರೆಬಿತ್ತು800 ವರ್ಷಗಳ ಪದ್ಧತಿ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ 'ಸುಪ್ರೀಂ' ಅನುಮತಿ.