ಕುಮಟಾ : ನಿಯಮಗಳನ್ನು ಮೀರಿ ಗೋಕರ್ಣದ ಸಮುದ್ರದಲ್ಲಿ ಇಳೆಯುವುದು ಹಾಗೂ ಈಜಾಡುವ ಸಮಯದಲ್ಲಿ ಅವಗಡಗಳು ಸಂಭವಿಸುತ್ತಿದ್ದು ಬೇರೆ ಬೇರೆ ಸ್ಥಳಗಳಲ್ಲಿ ಪ್ರವಾಸಿಗರು ಸಾವನ್ನಪ್ಪುತ್ತಿರುವ ಘಟನೆ ವರದಿಯಾಗುತ್ತಿತ್ತು ಆದರೆ ಗೋಕರ್ಣದ ಕೋಟಿತೀರ್ಥದಲ್ಲಿ ಈಜಾಡಲು ತೆರಳಿದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಗೋಕರ್ಣದ ಕೋಟಿತೀರ್ಥದಲ್ಲಿ ಈಜಾಡಲು ತೆರಳಿದ ವ್ಯಕ್ತಿ ಮುಳುಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಸಾವನ್ನಪ್ಪಿರುವ ವ್ಯಕ್ತಿ ಕುಮಟಾದ ಹೆರವಟ್ಟಾ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದ್ದು. ದಾಮು ನಾರಾಯಣ ಗೌಡ ಮೃತವ್ಯಕ್ತಿ ಎನ್ನಲಾಗಿದೆ.

RELATED ARTICLES  SSLC ಪರೀಕ್ಷೆಯಲ್ಲಿ ಅಂಕೋಲಾದ ತೇಜಸ್ ಸಾಧನೆ

ಕೋಟಿತೀರ್ಥದಲ್ಲಿ ಈಜಲು ತೆರಳಿದ ದಾಮು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಈತನ ಮೃತದೇಹಕ್ಕಾಗಿ ತೀವ್ರ ಹುಡುಕಾಟ ನಡೆಸಿದ ನಂತರ ಈತನ ಮೃತದೇಹ ಪತ್ತೆಯಾಗಿರುವುದು ವರದಿಯಾಗಿದೆ.

RELATED ARTICLES  ಗಿಬ್ ಪ್ರೌಢಶಾಲೆ ಕುಮಟಾದಲ್ಲಿ ಎನ್.ಟಿ.ಎಸ್.ಇ. “ಉನ್ನತಿ” ಶಿಬಿರ

ಸ್ಥಳೀಯರು ಹಾಗೂ ಪೊಲೀಸರ ಸಮ್ಮುಖದಲ್ಲಿ ಮುಂದಿನ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ. ಈಜಲು ತೆರಳುವುದು ಹಾಗೂ ಇಂತಹ ಅವಘಡಗಳು ಸಂಭವಿಸುವ ಸ್ಥಳಗಳಲ್ಲಿ ಕಟ್ಟುನಿಟ್ಟಿನ ನಿಯಮ ರೂಪಿಸಿದರೂ ಸಹ ಇಂತಹ ಪ್ರಕರಣಗಳು ವರದಿಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ.