ಕುಮಟಾ : ಕಳೆದ ಕೆಲವು ದಿನಗಳಿಂದ ಕೆಲವು ಕಾರ್ಮಿಕರು ಫೋನ್ ಮಾಡಿ ಕಾರ್ಮಿಕ ಇಲಾಖೆಯ ಕಿಟ್ ವಿತರಣೆಯಲ್ಲಿ ಗೊಂದಲ ಉಂಟಾಗುತ್ತಿರುವುದನ್ನು ತಿಳಸಿದ ಹಿನ್ನೆಲೆಯಲ್ಲಿ, ಇಂದು ಕುಮಟಾ ಹೊನ್ನಾವರ ಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ಶಾರದಾ ಮೋಹನ ಶೆಟ್ಟಿ ಹಾಗೂ ಜೆ.ಡಿ.ಎಸ್ ಸೂರಜ್ ನಾಯ್ಕ್ ಸೋನಿ ಅವರು ಕುಮಟಾ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ನಡೆಯುತ್ತಿರುವ ಗೊಂದಲಗಳ ಬಗ್ಗೆ ಚರ್ಚಿಸಿದರು. ಹಾಗೂ ಕಿಟ್ ಗಾಗಿ ಬೆಳಿಗ್ಗೆಯಿಂದಲೇ ಸರತಿಸಾಲಿನಲ್ಲಿ ನಿಂತಿರುವ ಜನರ ಬಳಿ ಸಮಾಲೋಚನೆ ನಡೆಸಿದರು.

RELATED ARTICLES  ಪತ್ರಕರ್ತ, ರಾಜ್ಯಸಭೆ ಮಾಜಿ ಸದಸ್ಯ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಇನ್ನಿಲ್ಲ.

ಈ ಸಂದರ್ಭದಲ್ಲಿ ಮಾಜಿ ಶಾಸಕಿಯರು ಮಾತನಾಡಿ, “ಸುಮಾರು 14000 ದಷ್ಟು ಕಾರ್ಮಿಕರಿರುವ ಕುಮಟಾ ತಾಲೂಕಿಗೆ ಕೇವಲ 8000 ದಷ್ಟು ಕಿಟ್ ಗಳು ಬಂದಿದ್ದು, ಕಿಟ್ ವಿತರಣಾ ಕಾರ್ಯಕ್ರಮ ಜುಲೈ 24ರಲ್ಲೇ ಆರಂಭಗೊಂಡಿದ್ದರೂ 15 ದಿನಗಳು ಕಳೆದರೂ 2000 ದಷ್ಟು ಕಿಟ್ ಗಳೂ ವಿತರಣೆಯಾಗಿರುವುದಿಲ್ಲ. ಇಷ್ಟೊಂದು ದಿನಗಳಲ್ಲಿ ಕಿಟ್ ಸಾಮಗ್ರಿಗಳು ಹಾಳಾದರೆ ಯಾರು ಹೊಣೆ?, ಅಲ್ಲದೇ ಕಿಟ್ ವಿತರಣೆಯಲ್ಲಿ ಸರಿಯಾದ ಕ್ರಮ ಅನುಸರಿಸದೇ, ಜನ ಸೂರ್ಯೋದಯಕ್ಕೂ ಮೊದಲೇ ಆಗಮಿಸಿ ಕೆಲವರಿಗೆ ಕಿಟ್ ದೊರಕದೇ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪುನಃ ಪುನಃ ಬರುವಂತಾಗಿದೆ. ಆದ್ದರಿಂದ ಯಾವುದೇ ಕಾರ್ಮಿಕರಿಗೆ ನಿರಾಶೆಯನ್ನುಂಟುಮಾಡದೆ, ಯಾವುದೇ ಗೊಂದಲವನ್ನು ಉಂಟುಮಾಡದೇ ಕಿಟ್ ಗಳನ್ನು ವಿತರಿಸಿ” ಎಂದರು.

RELATED ARTICLES  ಪರಿಸರ ಉಳಿಸುವುದೇ ನಮ್ಮ ಗುರಿ : ಸ್ವರ್ಣವಲ್ಲೀ ಶ್ರೀ

ಈ ಸಂದರ್ಭದಲ್ಲಿ ಮಾತನಾಡಿದ ಜೆ.ಡಿ.ಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಕಾರ್ಮಿಕರಿಗೆ ಗೊಂದಲ ಆಗುತ್ತಿದ್ದು ಪದೇಪದೇ ಈ ರೀತಿಯ ಗೊಂದಲಗಳು ಪುನರಾವರ್ತನೆಯಾಗುತ್ತದೆ. ಸ್ಥಳಿಯಾಡಳಿತ ಶಾಸಕರು ಹಾಗೂ ಸರಕಾರ ಸಂಪೂರ್ಣ ವೈಫಲ್ಯ ವಾಗಿದ್ದು ಈ ಗೊಂದಲ ಎದ್ದು ಕಾಣುತ್ತಿದೆ ಎಂದು ದೂರಿದರು.

ವಿಡಿಯೋ ನೋಡಿ.