ಅಂಕೋಲಾ: ತಾಲೂಕಿನ ಪಟ್ಟಣದ ಬಡಾವಣೆಯೊಂದರ ಮನೆಗೆ ಯಾರಿಗೂ ಕಾಣದಂತೆ ಹಿಂಬದಿಯಿಂದ ನುಗ್ಗಿದ್ದಲ್ಲದೆ ಒಣಗಿಸಲು ಹಾಕಿದ್ದ ಒಳ ಉಡುಪುಗಳನ್ನು ಕದ್ದಿದ್ದ ಕಾಮಾಂಧನನ್ನು ಸ್ಥಳೀಯರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಈತ ಅಕ್ರಮವಾಗಿ ಮನೆಗಳಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಯಾರಿಗೂ ತಿಳಿಯದಂತೆ ಮನೆಯ ಹಿಂಬದಿಯಿಂದ ಮನೆಯನ್ನು ಹತ್ತಿ ಅಲ್ಲಿ ಬಿಸಿಲಿನಲ್ಲಿ ಒಣಗಿಸಲು ಹಾಕಿದ್ದ ಮಹಿಳೆಯರ ಒಳ ಉಡುಪು ಕದ್ದಿದ್ದ ಎನ್ನಲಾಗಿದೆ. ಒಂದು ಕಡೆ ಸ್ಥಳೀಯರು ಇವನನ್ನು ಹಿಡಿಯಲು ಹೋದ ವೇಳೆ ತಪ್ಪಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದ.

RELATED ARTICLES  ಏಡಿ ಹಿಡಿಯಲು ಹೋಗಿದ್ದ ಯುವಕ ಸಾವು.

ಅಲ್ಲಿಂದ ಪರಾರಿಯಾದ ಬಳಿಕ ಮತ್ತೊಂದು ಮನೆಗೆ ನುಗ್ಗಿದ್ದು, ಈತನನ್ನ ಕಂಡ ಮನೆಯಲ್ಲಿದ್ದ ಮಹಿಳೆಯರು ಹೆದರಿಕೊಂಡಿದ್ದಲ್ಲದೆ, ಈತನ ನನ್ನು ಕಂಡು ಜೋರಾಗಿ ಬೊಬ್ಬೆ ಹಾಕಿದ್ದಾರೆ. ಈ ವೇಳೆ ಅಕ್ಕಪಕ್ಕ ಇದ್ದ ಸ್ಥಳೀಯರು ಜಮಾಯಿಸಿ ಯುವಕನಿಗೆ ಸರಿಯಾಗಿ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ.

RELATED ARTICLES  ಛಾಯಾ ಅರುಣ ಉಭಯಕರಗೆ ‘ರೋಟರಿ ಅಕ್ಕಾ’ ಪುರಸ್ಕಾರ

ಈತನಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಅವನಿಗೆ ಬುದ್ಧಿ ಹೇಳಿದ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ಯುವಕ ಉತ್ತರಪ್ರದೇಶ ಮೂಲದವನೆಂದು ತಿಳಿದುಬಂದಿದೆ. ತನಿಖೆ ನಂತರದಲ್ಲಿ ಈ ಕುರಿತಾದ ಪೂರ್ಣ ವಿವರಗಳು ಹೊರಬರಬೇಕಿದೆ.