ಕುಮಟಾ : ಕೊರೋನಾ ಎರಡನೇ ಅಲೆಯ ಭಯ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿಯೇ ಮೂರನೇ ಅಲೆಯ ಆತಂಕವು ಹೆಚ್ಚುತ್ತದೆ ಹೀಗಾಗಿ ಹೆಚ್ಚು ಗಳನ್ನು ಮಾಡುವ ಆರೋಗ್ಯ ಇಲಾಖೆ ಮುಂದಾಗುತ್ತಿದ್ದು ಆ ಮೂಲಕ ಕೊರೋನಾ ಹರಡುವುದನ್ನು ನಿಯಂತ್ರಿಸಲಾಗುತ್ತಿದೆ.
ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಕೊವಿಡ್ ಪರೀಕ್ಷೆಯನ್ನು ಪುರಸಭೆ ವತಿಯಿಂದ ನಡೆಸಲಾಯಿತು. ತಾಲೂಕಿನಲ್ಲಿ ಇತ್ತೀಚೆಗೆ ಪತ್ತೆಯಾಗುತ್ತಿರುವ ಕೊವಿಡ್ ಹೊಸ ಪ್ರಕರಣಗಳಲ್ಲಿ ಇತರ ಜನರ ಜೊತೆಗೆ ಮೀನುಗಾರ ಕುಟುಂಬದವರಲ್ಲಿಯೂ ಕಂಡುಬರುತ್ತಿದ್ದು ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಸುಮಾರು 200 ಕುಟುಂಬಗಳ ಸದಸ್ಯರು ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಾರೆ. ಈ ಕಾರಣದಿಂದ ಮೀನುಗಾರರ ಆರೋಗ್ಯದ ದೃಷ್ಟಿಯಿಂದ ಕುಮಟಾ ಪುರಸಭೆಯು ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವ ಮೀನುಗಾರ ಮಹಿಳೆಯರಿಗೆ ಕೊವಿಡ್ ಪರೀಕ್ಷೆ ನಡೆಸಲು ಮುಂದಾಗಿದೆ. ಅಲ್ಲದೇ ಕೊವಿಡ್ ನೆಗೆಟಿವ್ ವರದಿ ಪಡೆದವರಿಗೆ ಮಾತ್ರ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅವಕಾಶವಿದ್ದ ಕಾರಣ ಈ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುವ ಎಲ್ಲ ಮಹಿಳೆಯರಿಗೆ ಕೊವಿಡ್ ಪರೀಕ್ಷೆ ಮಾಡಲು ಕ್ರಮ ಕೈಗೊಳ್ಳಲಾಯಿತು.