ಕಾರವಾರ : ಜಿಲ್ಲೆಯ ಉನ್ನತಾಧಿಕಾರಿಗಳ ಜತೆ ಗುಪ್ತವಾಗಿ ಎನ್.ಐ.ಎ ತಂಡ ಭಟ್ಕಳದಲ್ಲಿ ದಾಳಿ ನಡೆಸಿದೆ. ಈ ಸಂಭಂದ ತಾಲೂಕಿನ ಹಲವೆಡೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಈ ವಿಚಾರಕ್ಕಾಗಿ ನಿನ್ನೆಯಿಂದಲೇ ಭಟ್ಕಳದಲ್ಲಿ ಜಿಲ್ಲಾ ಪೊಲೀಸವರಿಷ್ಠಾಧಿಕಾರಿ ಮೊಕ್ಕಾಮ್ ಹೂಡಿದ್ದರು.
ಉತ್ತರಕನ್ನಡ ಜಿಲ್ಲೆಯ ಭಟ್ಕಳ ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಅಲ್ಲದೆ, ಉಗ್ರರ ಸಂಪರ್ಕ ವಿಷಯ ಬಂದಾಗ ಈ ಹಿಂದೆ ಹಲವರು ಬಾರಿ ರಾಷ್ಟ್ರಮಟ್ಟದಲ್ಲಿ ರಾಜ್ಯಮಟ್ಟದಲ್ಲಿ ಭಟ್ಕಳ ಸುದ್ದಿಯಾಗಿದೆ. ಇದೀಗ ಮತ್ತೆ ಪದೇ ಪದೇ ಉಗ್ರರ ಸಂಪರ್ಕ ವಿಷಯದಲ್ಲಿ ಭಟ್ಕಳದ ಸದ್ದು ಮಾಡುತ್ತಿದೆ.
ಭಟ್ಕಳದ ಉಮರ್ ಸ್ಟ್ರೀಟ್ ,ತೆಂಗಿನ ಗುಂಡಿ ಹಾಗೂ ಸಾಗರ ರಸ್ತೆಯಲ್ಲಿರುವ ಮನೆಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದಿದೆ. ಭಟ್ಕಳದ ಅಮೀನ್ ಜುವೇಬ್, ಜವಾದ್ ಎಂಬ ಇಬ್ಬರನ್ನು ತೀವ್ರ ತನಿಖೆ ನಡೆಸುತಿದ್ದು.
ಈ ಹಿಂದೆ ದುಬೈ ನಲ್ಲಿ ಬಂಧನಕ್ಕೊಳಕ್ಕಾಗಿರುವ ಭಯೋತ್ಪಾದಕ ನೋರ್ವನ ತಮ್ಮನನ್ನೂ ಎನ್ .ಐ.ಎ ವಶಕ್ಕೆ ಪಡೆದಿದೆ. ಸ್ಥಳದಲ್ಲಿ ಕೆ.ಎಸ್.ಆರ್.ಪಿ ತುಕಡಿ ಜಮಾವಣೆ ಮಾಡಲಾಗಿದೆ. ಸ್ಥಳದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜು ಮೊಕ್ಕಾಂ ಹೂಡಿದ್ದಾರೆ. ಬಂಧಿತರು ಐಸಿಸ್ ನಂಟಿರುವ ಆರೋಪದ ಕುರಿತು ಅಧಿಕಾರಿಗಳಿಂದ ತನಿಖೆ ಮುಂದುವರೆದಿದೆ.