ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಶನಿವಾರ ಒಟ್ಟು 13, 900 ಡೋಸ್ ಲಭ್ಯವಿದೆ. ಇದರಲ್ಲಿ 12 ಸಾವಿರ ಕೋವಿಶೀಲ್ಡ್ ವ್ಯಾಕ್ಸಿನ್ ಡೋಸ್ ಮತ್ತು 1,900 ಕೋವಾಕ್ಸಿನ್ ಡೋಸ್ ಲಭ್ಯವಿದೆ.

ಅಂಕೋಲಾದಲ್ಲಿ 800, ಭಟ್ಕಳದಲ್ಲಿ 1,400, ಹೊನ್ನಾವರ 1,300 ಹಳಿಯಾಳ 700, ಜೋಯ್ಡಾ 300, ಕಾರವಾರ 1,300 , ಮುಂಡಗೋಡ 800, ಕುಮಟಾ 1,400, ಶಿರಸಿ 1,500, ಸಿದ್ದಾಪುರ 800, ಯಲ್ಲಾಪುರ 800, ದಾಂಡೇಲಿ 600 ಮತ್ತು ಜಿಲ್ಲಾಸ್ಪತ್ರೆಯಲ್ಲಿ 300 ಕೋವಿಶೀಲ್ಡ್ ಡೋಸ್ ಲಭ್ಯವಿದೆ. ಅಲ್ಲದೆ, ಕಾರವಾರದಲ್ಲಿ 500, ಶಿರಸಿಯಲ್ಲಿ ಸಾವಿರ , ದಾಂಡೇಲಿಯಲ್ಲಿ 100 ಹಾಗು ಜಿಲ್ಲಾಸ್ಪತ್ರೆಯಲ್ಲಿ 300 ಕೋವಾಕ್ಸಿನ್ ಲಭ್ಯವಿದೆ.

ಹೊನ್ನಾವರದಲ್ಲಿ ಎಲ್ಲಿ?

ಹೊನ್ನಾವರ: ತಾಲೂಕಾ ಆಸ್ಪತ್ರೆಯ ವತಿಯಿಂದ ಮಾರಥೋಮಾ ಶಾಲೆಯಲ್ಲಿ 300 ಡೋಸ್, ಪಸ್ಟ್ ಡೋಸ್ 100, ಸೆಕೆಂಡ್ ಡೋಸ್ 100, ಗರ್ಭಿಣಿ- ಬಾಳಂತಿಯರಿಗೆ 100 ಡೋಸ್ ನೀಡಲಾಗುವುದು.

RELATED ARTICLES  ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ.

ಹೊನ್ನಾವರ ಪಟ್ಟಣ ಪಂಚಾಯತ ಸಭಾಭವನದಲ್ಲಿ 300 ಡೋಸ್, ಪಸ್ಟ್ ಡೋಸ್ 150, ಸೆಕೆಂಡ್ ಡೋಸ್ 150 ಲಭ್ಯವಿದೆ. ಹೊಸಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300, ಪಸ್ಟ್ ಡೋಸ್ 150 ಲ, ಸೆಕೆಂಡ್ ಡೋಸ್ 150 ಲಭ್ಯವಿದೆ.

ಕುಮಟಾದಲ್ಲಿ ಎಲ್ಲೆಲ್ಲಿ?

IMG 20210806 WA0007

ಕುಮಟಾದಲ್ಲಿ ಒಟ್ಟು ನಾಳೆ 1,400 ಕೋವಿಶೀಲ್ಡ್ ಲಭ್ಯವಿದೆ. ಆದ್ಯತೆ ಮೇರೆಗೆ ಗರ್ಭಿಣಿ ಮತ್ತು ಬಾಣಂತಿಯರಿಗೆ ಮೊದಲೇ ಡೋಸ್ ಹಾಗು ಉಳಿದವರಿಗೆ ಎರಡನೇ ಡೋಸ್ ನೀಡಲಾಗುವುದು ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಮಾಹಿತಿ ನೀಡಿದೆ.

ಅಂಕೋಲಾದಲ್ಲಿ ಎಲ್ಲೆಲ್ಲಿ?

ಅಂಕೋಲಾ : ತಾಲೂಕಿನಲ್ಲಿ ಆಗಸ್ಟ್ 7 ರ ಶನಿವಾರ ಒಟ್ಟೂ 800 ಡೋಸ್ ಲಸಿಕೆ ಲಭ್ಯವಿದೆ. ಗಾಬಿತಕೇಣಿ ,ಅಗಸೂರು,ಬೆಳಸೆ,ಉಳುವರೆಗಳಲ್ಲಿ ತಲಾ 150 ಡೋಸ್ ಪೂರೈಸಲಾಗುತ್ತಿದ್ದು ಅವುಗಳಲ್ಲಿ ಮೊದಲ ಡೋಸ್ ( 80 ), ಎರಡನೇ ಡೋಸ್ (70) ಕಾಯ್ದಿರಿಸಲಾಗುತ್ತಿದೆ. ಪಟ್ಟಣ ವ್ಯಾಪ್ತಿಯ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ 200 ಡೋಸ್ ಲಭ್ಯವಿದ್ದು,ಮೊದಲ ಡೋಸ್ (100),ಎರಡನೇ ಡೋಸ್ (100)ಕಾಯ್ದಿರಿಸಲಾಗಿದೆ. ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾತಿನಿಧ್ಯವಿದ್ದು ಅರ್ಹ ಫಲಾನುಭವಿಗಳು ಲಸಿಕೆ ಪ್ರಯೋಜನ ಪಡೆದುಕೊಳ್ಳುವಂತೆ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಗುಜರಾತ್ ಉಳಿಸಿಕೊಂಡು ಹಿಮಾಚಲವನ್ನು ’ಕೈ’ ಯಿಂದ ಕಸಿದ ಕೇಸರಿ ಪಡೆ.

ಸಿದ್ದಾಪುರದಲ್ಲಿ ಎಲ್ಲಿ?

ಸಿದ್ದಾಪುರ: ತಾಲೂಕಿನಲ್ಲಿ ಶನಿವಾರದಂದು ವಿವಿಧೆಡೆ ಕೋವಿಶೀಲ್ಡ್ ಲಸಿಕಾ ಶಿಬಿರ ನಡೆಯಲಿದೆ. ಪ್ರಾಥಮಿಕ ಆರೋಗ್ಯಕೇಂದ್ರ ಕೋಲಸಿರ್ಸಿ ವತಿಯಿಂದ ನಿಡಗೋಡು ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಶಿಬಿರ ಆಯೋಜಿಸಲಾಗಿದೆ. ಬಿದ್ರಕಾನ್ ಗ್ರಾ.ಪಂ. ಸಭಾಭವನದಲ್ಲಿ ಕೋವಿಶೀಲ್ಡ್ 100 ಡೋಸ್,ಮತ್ತು ಕಾನಗೋಡು ಗ್ರಾ.ಪಂ ಸಭಾಭವನದಲ್ಲಿ ಕೋವಿಶೀಲ್ಡ್ 150 ಡೋಸ್ ಲಸಿಕೆ ಲಭ್ಯವಿದೆ. ಮಾವಿನಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಶೀಲ್ಡ್ 100 ಡೋಸ್ , ಹೇರೂರು ಗ್ರಾ.ಪಂ ಸಭಾಭವನದಲ್ಲಿ ಕೋವಿಶೀಲ್ಡ್ 100 ಡೋಸ್ ಲಸಿಕೆ ಲಭ್ಯವಿದೆ.