ಕಾರವಾರ : ಉತ್ತರಕನ್ನಡದಲ್ಲಿ ಕೋವಿಡ್ ಏರಿಳಿತ ಆಗುತ್ತಿದ್ದರೆ, ಕುಮಟಾ ಹಾಗೂ ಹೊನ್ನಾವರದಲ್ಲಿ ಪ್ರತಿದಿನ ಸರಿಸುಮಾರು 10ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದು, ಜನತೆ ಎಚ್ಚರಿಕೆಯಿಂದ ಇರಲೇ ಬೇಕು ಎಂಬುದನ್ನು ಒತ್ತಿ ಹೇಳುತ್ತಿದೆ.

ಕರೋನಾ ಎರಡನೆಯ ಅಲೆ ಮುಕ್ತಾಯವಾಗಿ ಇನ್ನೇನು ನೆಮ್ಮದಿ ಆವರಿಸುತ್ತದೆ ಎಂಬ ಭಾವದಲ್ಲಿ ಜನರಿದ್ದರು, ಆದರೆ ಈಗೀಗ ಮೂರನೇ ಅಲೆ ಯಾವಾಗ ಅಪ್ಪಳಿಸುತ್ತದೆ ಎಂಬ ಚಿಂತೆ ಜನತೆಯನ್ನು ಕಾಡುತ್ತಿರುವಂತಿದೆ.

ಉತ್ತರಕನ್ನಡದಲ್ಲಿ ಕೊರೋನಾ ಏರಿಳಿತ ಮುಂದುವರೆದಿದೆ. ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ನ ಪ್ರಕಾರ 59  ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ. ಯಾವುದೇ ಸಾವು ಸಂಭವಿಸಿಲ್ಲ ಎನ್ನಲಾಗಿದೆ.

RELATED ARTICLES  ಸಂಡೇ ಲಾಕ್ ಡೌನ್..! ಸ್ತಬ್ಧ ವಾದ ಕುಮಟಾ ಪಟ್ಟಣ.

ಹೆಲ್ತ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 3, ಅಂಕೋಲಾದಲ್ಲಿ 7, ಕುಮಟಾದಲ್ಲಿ 10, ಹೊನ್ನಾವರ 12, ಭಟ್ಕಳದಲ್ಲಿ 6, ಶಿರಸಿಯಲ್ಲಿ 13, ಸಿದ್ದಾಪುರದಲ್ಲಿ 0, ಯಲ್ಲಾಪುರದಲ್ಲಿ 8, ಮುಂಡಗೋಡ 0, ಹಳಿಯಾಳದಲ್ಲಿ 0, ಮತ್ತು ಜೋಯಿಡಾದಲ್ಲಿ  ಒಟ್ಟೂ 59 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 498 ಆಗಿದ್ದು, ಅವರಲ್ಲಿ 66 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 432 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

RELATED ARTICLES  ದರೋಡೆಗೆ ಹೊಂಚು ಹಾಕಿದ್ದವರ ಬಂಧನ : ಶಿರಸಿ ಪೊಲೀಸರಿಂದ ಕಾರ್ಯಾಚರಣೆ.

ಕಾರವಾರ 8, ಅಂಕೋಲಾ‌ 6, ಕುಮಟಾ 8 ಹೊನ್ನಾವರ 15, ಭಟ್ಕಳ 5, ಶಿರಸಿ 5, ಸಿದ್ದಾಪುರ 0, ಯಲ್ಲಾಪುರ 0, ಮುಂಡಗೋಡ 0, ಹಳಿಯಾಳ 0, ಜೋಯ್ಡಾ 0 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 47 ಜನ ಕೊರೋನಾ ಗೆದ್ದು ಬಂದವರಾಗಿದ್ದಾರೆ.

ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.