ಅಂಕೋಲಾ : ಅಂಕೋಲಾ ಹುಬ್ಬಳ್ಳಿ ಮಾರ್ಗಮಧ್ಯೆ ಅಂದರೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಶುಕ್ರವಾರ ಸರಣಿ ಅಪಘಾತಗಳು ನಡೆದಿದ್ದು, ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಅಪಘಾತ ೧.

ಅಂಕೋಲಾ ತಾಲೂಕಿನ ಸರಳೆ ಬೈಲ್ ಬಳಿ ನಡೆದ ಅಪಘಾತದಲ್ಲಿ ಲಾರಿ ಹಾಗೂ ಕಂಟೇನರ್ ನಡುವೆ ಡಿಕ್ಕಿ ಸಂಭವಿಸಿ , ಕಂಟೇನರ್ ವಾಹನದಲ್ಲಿದ್ದ ಸಹಾಯಕ ಚಾಲಕ ಕಲಘಟಗಿಯ ಬಸವರಾಜ್ ನಾಗಪ್ಪ ಉಮ್ಮಚಿಗಿ ಮೃತಪಟ್ಟಿದ್ದಾನೆ.
ಅಪಘಾತದ ರಭಸಕ್ಕೆ ಎರಡೂ ವಾಹನದ ಮುಖಗಳು ಒಂದೇ ದಿಕ್ಕಿಗೆ ತಿರುಗಿದಂತಿದೆ.

RELATED ARTICLES  ಪ್ರಾರ್ಥನಾ ಪ್ರತಿಷ್ಠಾನ ಹಾಗೂ ಆನಂದಾಶ್ರಮ ಪ.ಪೂ. ಕಾಲೇಜಿನ ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ ಸಂಪನ್ನ

ಅಪಘಾತ ೨.

ಗದಗದಿಂದ ಯಲ್ಲಾಪುರ ಅಂಕೋಲ ಮಾರ್ಗವಾಗಿ ಮಾರ್ಗವಾಗಿ ಗೋವಾಕ್ಕೆ ಹೊರಟಿದ್ದ ಕಾರಿಗೆ ತಾಲೂಕಿನ ಹೆಬ್ಬುಳ ಬಳಿ ಎದುರಿನಿಂದ ಅತಿವೇಗವಾಗಿ ಬಂದ ಲಾರಿಯೊಂದು ಗುದ್ದಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗದಗದ ಪಂಚಾಕ್ಷರಿ ನಗರ ನಿವಾಸಿ ವಸಂತ್ ಅಕ್ಕಿ ಮೃತಪಟ್ಟು ಉಳಿದ ಮೂವರಿಗೆ ಗಾಯಗಳಾಗಿದೆ.ಬೇರೆ ವಾಹನವೊಂದನ್ನು ಓವರ್ ಟೇಕ್ ಮಾಡುವ ವೇಳೆ ಲಾರಿ ಚಾಲಕನ ನಿರ್ಲಕ್ಷತನದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

RELATED ARTICLES  ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಪ್ರಯೋಜನ ಪಡೆಯಬೇಕು : ದಿನಕರ ಶೆಟ್ಟಿ

ಈ ಎರಡು ಪ್ರತ್ಯೇಕ ಪ್ರತ್ಯೇಕ ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.. ಸಿಪಿಐ ಸಂತೋಷ್ ಶೆಟ್ಟಿ, ಪಿಎಸೈ ಪ್ರವೀಣ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.